ಬೆಂಗಳೂರು : ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಸಿ. ಎನ್ ಮಂಜುನಾಥ್ ಅಧಿಕಾರವಧಿ ಇಂದು ಮುಕ್ತಾಯಗೊಂಡಿದ್ದು ಇಂದು ಮುಖ್ಯಮಂತ್ರಿ ಅವರಿಂದ ನೂತನ ನಿರ್ದೇಶಕರ ಆಯ್ಕೆ ಬಗ್ಗೆ ಅಂತಿಮ ನಿರ್ಧಾರಗೊಳ್ಳಲಿದೆ. ಇಂದು ಅಧಿಕೃತವಾಗಿ ನಿರ್ಧರಿಸಿ ಆಯ್ಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ತಿಳಿಸಲಿದ್ದಾರೆ ಎಂದು0 ತಿಳಿದುಬಂದಿದೆ.
ಹೃದ್ರೋಗ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ಡಾ.ಸಿ.ಎನ್.ಮಂಜುನಾಥ್ ಈ ನಾಡು ಕಂಡ ಶ್ರೇಷ್ಠ ಮಟ್ಟದ ಹೃದ್ರೋಗ ತಜ್ಞರು. ಕಳೆದ ಬಾರಿ ಜಯದೇವ ಆಸ್ಪತ್ರೆ ನಿರ್ದೇಶಕರ ಅವಧಿ ಮುಗಿಯುತ್ತಿದೆ ಅಂದಾಗ ಸಾವಿರಾರು ರೋಗಿಗಳು ಆತಂಕಗೊಂಡಿದ್ದರು, ಸಿಬ್ಬಂದಿ ಕಣ್ಣೀರಿಟ್ಟಿದ್ದರು. ಆದರೆ ಆಗಿನ ಬಿಜೆಪಿ ಸರ್ಕಾರ ಇವರ ಸೇವೆಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಿತ್ತು. ಆದರೆ ಈಗಿನ ಸರ್ಕಾರಕ್ಕೆ ಅಂತಹ ಯಾವ ಆಲೋಚನೆಯೂ ಇಲ್ಲದಿರುವುದು ಸ್ಪಷ್ಟವಾಗಿದೆ.
ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಇಂದು ಮುಕ್ತಾಯಗೊಳ್ಳಲಿದೆ. ಸರ್ಕಾರವೂ ಮಂಜುನಾಥ್ ಅವರ ಅವಧಿಯನ್ನ ಮುಂದುವರೆಸುವು ನಿರ್ಧಾರದಿಂದ ಹಿಂದೆ ಸರಿದಿದ್ದು ಹೊಸ ನಿರ್ದೇಶಕರ ಆಯ್ಕೆಗೆ ಪತ್ರಿಕಾ ಪ್ರಕಟನೆಯ ಮೂಲಕ ಅರ್ಜಿ ಸಲ್ಲಿಕೆಗೆ ತಿಳಿಸಿತ್ತು. ಇದರಂತೆ ನಿನ್ನೆ ಅರ್ಜಿ ಸಲ್ಲಿಕೆಯ ಅವಧಿ ಕೂಡಾ ಮುಗಿದಿದ್ದು ಹತ್ತಾರು ಅರ್ಜಿಗಳು ಕೂಡಾ ಈ ಹುದ್ದೆಗೆ ಬಂದಿವೆ.
ಆದ್ರೆ ಈ ನಡುವೆ ಈ ಜಾಗಕ್ಕೆ ಮೈಸೂರಿನ ಜಯದೇವ ಆಸ್ಪತ್ರೆಯ ನಿರ್ದೇಶಕ ಮೈಸೂರಿನ ಡಾ. ಸದಾನಂದ ಅವರನ್ನು ನೇಮಿಸಲು ಚಿಂತನೆ ನಡೆದಿದೆ. ಎಲ್ಲಾ ಪ್ರೊಸಿಜರ್ ಮುಗಿದಿದೆ ಅಂತಾ ಕೂಡಾ ಹೇಳಲಾಗುತ್ತಿದೆ.ಇನ್ನು ಜಯದೇವ ಆಸ್ಪತ್ರೆಯ ನಿರ್ದೇಶಕರ ಅವಧಿ ಮುಕ್ತಾಯ ಹಿನ್ನಲೆ ಸಾಕಷ್ಟು ಸಿಬ್ಬಂದಿ ವರ್ಗ ಹಾಗೂ ರೋಗಿಗಳು ಬೇಸರ ಹೊರ ಹಾಕಿದ್ದಾರೆ. ಉತ್ತಮ ವೈದ್ಯರು ನಿರ್ದೇಶಕರು ಸಾಕಷ್ಟು ಬದಲಾವಣೆ ಮಾಡಿದ್ದಂತವರು ಅಂತಾ ಬೇಸರ ಹೊರ ಹಾಕಿದ್ದಾರೆ.