ಬೆಂಗಳೂರು : ಬೆಂಗಳೂರಿನಲ್ಲಿ ಐವಿಎಫ್ ಕೇಂದ್ರಗಳ ಮೇಲೆ ಆರೋಗ್ಯ ಇಲಾಖೆ ಇದೀಗ ಹದ್ದಿನ ಕಣ್ಣು ಇಟ್ಟಿದೆ. ನಗರದಲ್ಲಿನ ಆಸ್ಪತ್ರೆಗಳಲ್ಲೂ ಕೂಡ ಅಂಡಾಣು ಮಾರಾಟ ದಂಧೆ ನಡೆಯುತ್ತಿದೆ. ಪ್ರಕರಣವನ್ನು ರಾಜ್ಯ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಮಹಾರಾಷ್ಟ್ರ ಆರೋಗ್ಯ ಇಲಾಖೆ ಬಳಿಕ ರಾಜ್ಯದಲ್ಲೂ ಇಲಾಖೆ ಅಲರ್ಟ್ ಆಗಿದೆ. ಮಹಾರಾಷ್ಟ್ರ ಆರೋಗ್ಯ ಇಲಾಖೆಯಿಂದ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. ಅಂಡಾಣು ಮಾರಾಟ ಜಾಲದ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಹಾರಾಷ್ಟ್ರದ ಆರೋಗ್ಯ ಇಲಾಖೆಗೆ ಮಾಹಿತಿ ಕೇಳಿದ್ದಾರೆ. ಮಹಿಳೆಯರಿಗೆ ಹಣದ ಆಮಿಷ ಒಡ್ಡಿ ಅಂಡಾಣು ಹೊರ ತೆಗೆಯುತ್ತಿದ್ದ ಜಾಲ ಕಾನೂನುಬಾಹಿರವಾಗಿ ಅಂಡಾಣು ಹೊರತೆಗೆಯುತ್ತಿದ್ದ ಬೃಹತ್ ಜಾಲ ಬೆಳಕಿಗೆ ಬಂದಿದೆ.
ಬೆಂಗಳೂರು, ತೆಲಂಗಾಣ, ಮಹಾರಾಷ್ಟ್ರದ, ನಾಗಪುರ, ಪುಣೆ ಹಾಗೂ ನಾಸಿಕ ಜಿಲ್ಲೆಯಲ್ಲಿ ಈ ಒಂದು ಜಾಲ ವಿಸ್ತರಿಸಿದೆ. ಅಮಾಯಕರ ಜೀವ ಅಪಾಯಕ್ಕೆ ದೂಡುತ್ತಿದ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಅಂಡಾಣು ಮಾರಾಟ ದಂಧೆ ಹಿಂದೆ ಬೆಂಗಳೂರು ಹಿನ್ನೆಲೆ, ಹೀಗಾಗಿ ಸಮಗ್ರ ತನಿಖೆಗೆ ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುವಂತೆ ಸೂಚಿಸಿದ್ದಾರೆ. ಆಸ್ಪತ್ರೆ ಹಾಗೂ ವೈದ್ಯರ ಮಾಹಿತಿ ಸಂಗ್ರಹಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಗೃಹ ಇಲಾಖೆಯಿಂದಲೂ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಪ್ರಕರಣದಿಂದ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಸಚಿವರಿಂದ ಸೂಚನೆ ಬಂದಿದೆ.








