ಬೆಂಗಳೂರು :ಬೆಂಗಳೂರಿನ ಪೋಥಿಸ್ ಶೋ ರೂಮ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಮೈಸೂರು ರಸ್ತೆಯ ಗಾಂಧಿ ನಗರದಲ್ಲಿರುವ ಫೋಥಿಸ್ ಬಟ್ಟೆ ಶೋ ರೂಮ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 30 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಚೆನ್ನೈನಿಂದ ಬಂದಿದ್ದು, ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಟೆಂಬರ್ ಲೇಔಟ್ ನಲ್ಲಿರುವ ಶೋ ರೂಮ್ ಮೇಲೆ ಈ ದಾಳಿ ನಡೆದಿದೆ. ಆದಾಯ ತೆರಿಗೆ ವಂಚನೆ ಆರೋಪದ ಮೇಲೆ ಈ ದಾಳಿ ನಡೆದಿದೆ. ತಮಿಳುನಾಡಿನ ಉದ್ಯಮಿಯೊಬ್ಬರಿಗೆ ಸೇರಿದ ಶೂ ರೂಮ್ ಇದಾಗಿದೆ.