ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಈ ಹಿಂದೆ ಆಪರೇಷನ್ ಕಮಲ, ಆಪರೇಷನ್ ಹಸ್ತದಂತಹ ಅನೇಕ ಘಟನೆಗಳು ನಡೆದಿವೆ. ಅಲ್ಲದೆ ಇತ್ತೀಚಿಗೆ ಕೆಲವು ರಾಜಕೀಯ ನಾಯಕರು, ಮುಖಂಡರುಗಳು ಬಿಜೆಪಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಎಲ್ಲದಕ್ಕೂ ಪ್ರಮುಖ ಕಾರಣ ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪರೇಷನ್ ಹಸ್ತ ಅಂತ ರಾಜ್ಯದ ಜನತೆ ಮಾತನಾಡಿಕೊಳ್ಳುತ್ತಾರೆ. ಇದೀಗ ಎಂಎಲ್ಸಿ ಟಿ.ಎ ಶರವಣ ಅವರಿಗೂ ಡಿಕೆ ಶಿವಕುಮಾರ್ ಗಾಳ ಹಾಕಿದ್ರಾ? ಎನ್ನುವ ಪ್ರಶ್ನೆ ಉದ್ಭವಿಸಿದೆ.
ಹೌದು ಜೆಡಿಎಸ್ ಎಂಎಲ್ಸಿ ಟಿ.ಎ ಶರವಣಗೆ ಡಿಸಿಎಂ ಡಿಕೆ ಗಾಳ ಹಾಕಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಟಿ.ಎ ಶರವಣ ರಾಜೀನಾಮೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಮಾತನಾಡಿದ್ದು, ನೀನ್ ಯಾವಾಗಪ್ಪ ರಾಜಿನಾಮೆ ಕೊಡೋದು? ಎಂದು ಪ್ರಶ್ನಿಸಿದ್ದಾರೆ. ಕೆಡಿಪಿ ಸಭೆಗೊ ಮುನ್ನ ಶರವಣ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಶ್ನೆಗೆ ಮರು ಮಾತನಾಡದೆ ಶರವಣ ಅವರು ನಕ್ಕು ಸುಮ್ಮನಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.








