ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನಟ ದರ್ಶನ್ ಜಾಮೀನು ರದ್ದು ಮಾಡಿದೆ ಈ ಹಿನ್ನೆಲೆಯಲ್ಲಿ ಇಂದು ಸಂಜೆ ಒಳಗಾಗಿ ನಟ ದರ್ಶನ್ ಆಗಲೇಬೇಕು ಒಂದು ವೇಳೆ ಶರಣಾಗದಿದ್ದರೆ ಪೊಲೀಸರೇ ನಟ ದರ್ಶನ್ ಅವರನ್ನು ಕರೆ ತರುವ ಸಾಧ್ಯತೆ ಇದೆ.
ಇದೀಗ ಬಂದಿರುವ ಮಾಹಿತಿಯ ಪ್ರಕಾರ ನಟ ದರ್ಶನ್ ತಮಿಳುನಾಡು ಕಡೆಗೆ ಹೋಗಿರುವ ವದಂತಿ ತಿಳಿದು ಬಂದಿದ್ದು, ಸುವರ್ಣಾವತಿ ಡ್ಯಾಮ್ ಬಳಿಯ ಟೋಲ್ ಮೂಲಕ ದರ್ಶನ್ ತಮಿಳುನಾಡಿಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ರೆಡ್ ಕಲರ್ ಕಾರೊಂದು ದರ್ಶನ್ಗೆ ಸೇರಿದ್ದು ಎನ್ನಲಾದ ಕಾರಿನ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಈ ವಿಡಿಯೋ ಸ್ಟೇಟಸ್ ಅಲ್ಲಿ ಹಾಕಿದ್ದು ತಿಳಿದುಬಂದಿದೆ. ಚಾಮರಾಜನಗರ ಟೋಲ್ ಬಳಿ ಈ ಒಂದು ಕಾರು ತಮಿಳುನಾಡು ಕಡೆಗೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಆದರೆ ತಮಿಳುನಾಡಿನ ಸತ್ಯಮಂಗಲದ ಜಾತ್ರೆಯಲ್ಲಿ ಭಾಗಿಯಾಗಲು ದರ್ಶನ್ ತೆರಳಿದ್ದಾನೆ ಎನ್ನಲಾಗಿದೆ