ನವದೆಹಲಿ : ಕತಾರ್ ಇಂಧನ ಘಟಕಗಳ ಮೇಲೆ ಇರಾನ್ ದಾಳಿ ನಡೆಸಿದ್ದು ಕತಾರ್ ನ ಶೇಕಡ 17ರಷ್ಟು ಎನರ್ಜಿ ಸಾಮರ್ಥ್ಯ ಭಸ್ಮವಾಗಿದೆ ಎಂದು ಕತಾರ್ ಎನರ್ಜಿ CEO ಸಾದ್ ಅಲ್-ಕಾಬಿ ಕಳವಳ ವ್ಯಕ್ತಪಡಿಸಿದ್ದಾರೆ.
ಇರಾನ್ ನಡೆಸಿದ ಅಟ್ಟಹಾಸಕ್ಕೆ ಅನಿಲ ಘಟಕಗಳು ನಲುಗಿ ಹೋಗಿವೆ. ತೈಲ ಘಟಕಗಳ ದುರಸ್ತಿಗೆ ಕನಿಷ್ಠ ಮೂರರಿಂದ ಐದು ವರ್ಷಗಳು ಬೇಕು. ರಂಜಾನ್ ದಿನದಂದೆ ಮುಸ್ಲಿಂ ರಾಷ್ಟ್ರದಿಂದ ದಾಳಿ ಆಗಿದೆ ಇದು ಅತೀವ ನೋವು ತಂದಿದೆ ಎಂದು ಸಾದ್ ಅಲ್-ಕಾಬಿ ಬೇಸರ ವ್ಯಕ್ತಪಡಿಸಿದ್ದಾರೆ.
ದಾಳಿಯಿಂದ ಜಾಗತಿಕ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಇಟಲಿ ಹಾಗು ಬೆಲ್ಜಿಯಂ ರಾಷ್ಟ್ರಗಳಿಗೆ ಗ್ಯಾಸ್ ಕಟ್ ಆಗಲಿದೆ ಹಾಗೂ ದೀರ್ಘಕಾಲದ ಒಪ್ಪಂದಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.








