ನವದೆಹಲಿ : ಇರಾನ್ ಅಮೆರಿಕ ನಡುವೆ ಯುದ್ಧದ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ಈ ಯುದ್ಧದಲ್ಲಿ ಇರಾನ್ ಸೇನೆ ಸೋತಿದೆ ನಮಗೆ ಯಾವುದೇ ಬ್ಯಾಕಪ್ ಯೋಜನೆ ಅಗತ್ಯವಿಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
ನಾವು ಈಗಾಗಲೇ ಇರಾನ್ ಸೇನೆಯನ್ನು ಸೋಲಿಸಿದ್ದೇವೆ. ಇರಾನ್ ಬಳಿ ಕ್ಷಿಪಣಿಗಳು, ಉತ್ಪಾದನಾ ಸಾಮರ್ಥ್ಯ ಕಡಿಮೆ ಆಗಿದೆ ಇರಾನಿಗೆ ನಾವು ದೊಡ್ಡ ಹೊಡೆತ ನೀಡಿದ್ದೇವೆ. ಕಾರ್ಯಚರಣೆಯಲ್ಲಿ ನಮ್ಮ ಸೇನೆ ಉತ್ತಮವಾಗಿ ಕೆಲಸ ಮಾಡಿದೆ. ಅಲ್ಲದೇ ಹೊರ್ಮುಜ್ ಜಲಸಂಧಿಯನ್ನು ಶೀಘ್ರದಲ್ಲಿ ತೆರೆಯುತ್ತೇವೆ. ಜಲಸಂಧಿಯಲ್ಲಿ ಸುಂಕ ವಿಧಿಸಲು ಒಪ್ಪಿಗೆ ನೀಡಲ್ಲ. ಇದು ಅಂತರಾಷ್ಟ್ರೀಯ ಜಲ ಪ್ರದೇಶ ಎಂದು ಟ್ರಂಪ್ ಹೇಳಿದ್ದಾರೆ.








