ನವದೆಹಲಿ : ಜೂನ್ 21 ರ ಇಂದು ಅಂತಾರಾಷ್ಟ್ರೀಯ ಯೋಗದಿನಾಚರಣೆ ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿ ವಿಶಾಖಪಟ್ಟಣಂನಲ್ಲಿ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಲಂಡನ್ನಲ್ಲಿರುವ ಭಾರತದ ಹೈಕಮಿಷನ್, ಕಿಂಗ್ಸ್ ಕಾಲೇಜ್ ಲಂಡನ್ನ ಸಹಭಾಗಿತ್ವದಲ್ಲಿ ವಾರ್ಷಿಕ ಅಂತರರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸುತ್ತಿದ್ದು, ಜನರು ಯೋಗ ಪ್ರದರ್ಶನ ಮಾಡುತ್ತಿದ್ದಾರೆ.
ವಿಶಾಖಪಟ್ಟಣಂನ ಆರ್.ಕೆ. ಬೀಚ್ ನಿಂದ ಭೋಗಪುರಂವರೆಗೆ 26 ಕಿಲೋಮೀಟರ್ ಉದ್ದದ ಕಾರಿಡಾರ್ ನಲ್ಲಿ ಯೋಗ ದಿನಾಚರಣೆ ನಡೆದಿದ್ದು, ಏಕಕಾಲದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಯೋಗ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ 108 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಪ್ರದರ್ಶಿಸಲಾಗುವುದು. ಸುಮಾರು 25000 ಬುಡಕಟ್ಟು ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಲಿದ್ದಾರೆ. ಯೋಗ ದಿನದಂದು ಹೊಸ ವಿಶ್ವ ದಾಖಲೆಗೆ ಆಂಧ್ರ ಸರ್ಕಾರ ಸಜ್ಜಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
VIDEO | London: People perform yoga as the High Commission of India in London hosts its annual International Day of Yoga in partnership with King’s College London.
(Full video available on PTI Videos – https://t.co/n147TvrpG7) pic.twitter.com/O4CxWT1vig
— Press Trust of India (@PTI_News) June 21, 2025