ಬೆಂಗಳೂರು : ಕನ್ನಡ ಭಾಷೆ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಹಲವಾರು ಘಟನೆಗಳು ನಡೆದಿದ್ದು, ಇದೀಗ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾರ್ಡನ್ ಒಬ್ಬ ಧಮ್ಕಿ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಬಳಿ ಇರುವಂತಹ ಎ ಎಂ ಸಿ ಕಾಲೇಜಿನ ಹಾಸ್ಟೆಲ್ ವಾರ್ಡನ್ ಸುರೇಶ್ ಕನ್ನಡಕ್ಕೆ ಅವಮಾನ ಮಾಡಿದ್ದು, ಕನ್ನಡ ಮಾತನಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ ಅವಾಜ್ ಹಾಕಿದ್ದಾನೆ.
ಕನ್ನಡ ಬೇಡ ಹಿಂದಿಯಲ್ಲಿ ಮಾತಾಡು. ಇದು ಒಂದು ಸಂಸ್ಥೆ ನಿನಗೆ ಕನ್ನಡದಲ್ಲಿ ಮಾತಾಡುವುದಾದರೆ ಮನೆಗೆ ಹೋಗಿ ಮಾತನಾಡು ಇದು ಒಂದು ಸಂಸ್ಥೆ ಅರ್ಥ ಆಯ್ತಾ. ಸಂಸ್ಥೆ ಆದರೆ ಹಿಂದಿಯಲ್ಲಿ ಮಾತಾಡ್ಬೇಕಾ ಕನ್ನಡದಲ್ಲಿ ಮಾತನಾಡಬಾರದ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದಾಗ ಇಲ್ಲ ಬೇಡ ಇಲ್ಲಿ ಕಡ್ಡಾಯ ಇಲ್ಲ ಕಡ್ಡಾಯ ಇಲ್ಲ ಅಂದರೆ ಮತ್ತೇನು ಅಂತ ಕೇಳಿದಾಗ ಕಡ್ಡಾಯ ಇಲ್ಲ ಅಷ್ಟೇ. ಏನಾದರೂ ಡೌಟ್ ಇದೆಯಾ ಅಂತ ಅವಾಜ್ ಹಾಕಿದ್ದಾನೆ. ನಿನ್ ಜೊತೆ ಹಿಂದಿಯಲ್ಲಿ ಮಾತಾಡಬೇಕಾ ಅಥವಾ ಕನ್ನಡದಲ್ಲಿ ಮಾತಾಡಬೇಕಾ ಅಂತ ನಾನು ನಿರ್ಧಾರ ಮಾಡುತ್ತೇನೆ ಇಲ್ಲಿ ಏನು ನಡೆಯಲ್ಲ ಅರ್ಥ ಆಯ್ತಾ.
ಯಾರ ಅನುಮತಿಗೂ ಬೇಕಾಗಿಲ್ಲ ನಾನು ಮಾತನಾಡುವುದಕ್ಕೆ ಇದು ನಿನ್ನ ಮನೆಯಲ್ಲ. ಇದು ಒಂದು ಸಂಸ್ಥೆ ಮೂರ್ಖತನ ಮಾಡಬೇಡ ಇಲ್ಲಿ ಅಂತ ಧಮ್ಕಿ ಹಾಕಿದ್ದಾನೆ. ಕನ್ನಡ ಮಾತನಾಡಬಾರದು ಎಂದಿದ್ದ ವಾರ್ಡನ್ ಸುರೇಶನನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಬನ್ನೇರುಘಟ್ಟ ಪೊಲೀಸರು ಆರೋಪಿ ಸುರೇಶನ್ನು ಬಂಧಿಸಿದ್ದಾರೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ಕೂಡ ದಾಖಲಾಗಿತ್ತು. ಮಹೇಶ್ ಹತ್ತಿ ಎಂಬವರು ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಸುರೇಶ್ ನನ್ನು ಬಂಧಿಸಿದ್ದಾರೆ.
ಈತ ಕೇರಳ ಮೂಲದವನಾಗಿದ್ದು ಎಎಂಸಿ ಕಾಲೇಜಿನ ಹಾಸ್ಟೆಲ್ ವಾರ್ಡನ್ ಆಗಿದ್ದ. ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹೋರಾಟಗಾರ ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಕಾಲೇಜು ಮುಂದೆ ಪ್ರತಿಭಟನೆ ನಡೆಸಲಾಯಿತು, ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು.ಈ ವೇಳೆ ಕಾಲೇಜಿಗೆ ಹಾಕಲು ಪ್ರತಿಭಟನಾಕಾರರು ಯತ್ನಿಸಿದರು ಪೊಲೀಸರು ತಕ್ಷಣ ಒಳಗೆ ಹೋಗದಂತೆ ಪ್ರತಿಭಟನಾಕಾರರನ್ನು ತಡೆದಿದ್ದಾರೆ








