ಧರ್ಮಸ್ಥಳ : ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಶಾಲಾ ಬಾಲಕಿಯ ಅನುಮಾನಾಸ್ಪದ ಸಾವು ವಿಚಾರವಾಗಿ ಇದೀಗ ಈ ಒಂದು ಪ್ರಕರಣದ ತನಿಖೆಯನ್ನು ಡಿಜಿ ಐಜಿಪಿ ಸಲೀಂ ಅವರು ಎಸ್ಐಟಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.
ಹೌದು 15 ವರ್ಷದ ಬಾಲಕಿ ಶವವನ್ನು ಹೂತಿದ್ದೇನೆ ಎಂದು ಅನಾಮಿಕ ವ್ಯಕ್ತಿ ಎಸ್ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದ. ಈತನ ಹೇಳಿಕೆ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಶಾಕ್ ಗೆ ಒಳಗಾಗಿದ್ದರು. ಅಲ್ಲದೆ ಇತ್ತೀಚಿಗೆ ಮತ್ತೋರ್ವ ದೂರುದಾರ ಟಿ ಜಯಂತ್ ಎನ್ನುವ ಹೊಸ ಸಾಕ್ಷಿದಾರ ಕೂಡ ಬಾಲಕಿಯ ಶವವನ್ನು ಹೂತಿರುವುದು ಕಣ್ಣಾರೆ ನೋಡಿದ್ದೇನೆ ಎಂದು ಸಾಕ್ಷಿ ಹೇಳಿದ್ದ ಇವೆಲ್ಲದರ ಹೇಳಿಕೆಗಳಿಂದ ಇದು ಒಂದು ಪ್ರಕರಣದ ತನಿಖೆಯನ್ನು ಎಸ್ಐಟಿಗೆ ಹಸ್ತಾಂತರಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಟಿ ಜಯಂತ್ ದೂರು ನೀಡಿದ್ದರು. ಪೊಲೀಸ್ ಅಧಿಕಾರಿಯ ವಿರುದ್ಧ ಜಯಂತ್ ಗಂಭೀರವಾದ ಆರೋಪ ಮಾಡಿದ್ದಾರೆ. ರಾಜ್ಯ ಹೆದ್ದಾರಿ 37ರ ಅರಣ್ಯದಲ್ಲಿ ಬಾಲಕಿಯ ಶವ ಹೂತು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅಪ್ರಾಪ್ತೆಯ ಶವವನ್ನು ಪೋಲಿಸ್ ಅಧಿಕಾರಿ ಹೂತು ಹಾಕಿದ್ದಾರೆ ಎಂದು ಜಯಂತ್ ಆರೋಪಿಸಿದ್ದಾರೆ. ಕಾನೂನು ಪ್ರಕ್ರಿಯೆಗೆ ಒಳಪಡಿಸದೆ ಶವ ಹಾಕಿರುವುದಾಗಿ ಆರೋಪಿಸಿದ್ದಾರೆ.