ಬೀದರ್ : ಬೀದರ್ ನಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು ಮಗುವಿನ ಜನನ ಮತ್ತು ಹೆರಿಗೆ ಮುಚ್ಚಿಡುವ ಉದ್ದೇಶದಿಂದ ಗಂಡು ಮಗುವಿನ ಮರ್ತ ದೇಹವನ್ನು ಅಂಬೇಡ್ಕರ್ ವೃತ್ತದ ಬಳಿ ಬಿಸಾಡಿ ಹೋಗಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರುದನೂರ ಗ್ರಾಮದಲ್ಲಿ ನಡೆದಿದೆ.
ಹೌದು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ರುದನೂರ ಗ್ರಾಮದಲ್ಲಿ ಅಂಬೇಡ್ಕರ್ ವೃತ್ತದ ಬಳಿ ನಿಜನ್ನೇ ಮಧ್ಯರಾತ್ರಿ ಅಪರಿಚಿತರು ಗಂಡು ಮಗುವಿನ ಮೃತ ದೇಹ ಬಿಸಾಡಿದ ಘಟನೆ ಜರುಗಿದೆ. ಘಟನೆಯ ಸಂಭಂದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯ ಆದೇಶದ ಮೇರೆಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೂರಿನ ಅನ್ವಯ ಭಾಲ್ಕಿ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.