ಬೆಳಗಾವಿ : ಇತ್ತೀಚಿಗೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಬಾಣಂತಿಯರ ಸಾವು ಪ್ರಕರಣ ಬಾರಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ಇದೀಗ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಹಸಿವಿನಿಂದ ನವಜಾತ ಶಿಶುವನ್ನು ಸಾವನ್ನಪ್ಪಿದೆ. ಇದರ ಬೆನ್ನಲ್ಲೇ ಬಾಣಂತಿ ಹಾಗೂ ಆಕೆಯ ಅತ್ತೆ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು ನವಜಾತ ಶಿಶುವನ್ನು ಬಿಟ್ಟು ಪರಾರಿಯಾದ ತಾಯಿಯನ್ನು ಬಿಬಿಜಾನ್ ಸದ್ದಾಂ ಸಯ್ಯದ್ (28) ಸೇರಿದ್ದ ನವಜಾತ ಶಿಶು ಎಂದು ತಿಳಿದುಬಂದಿದೆ.ಕಳೆದ ಡಿಸೆಂಬರ್ 8 ರಂದು ಮಧ್ಯಾಹ್ನ 12ಕ್ಕೆ ಅತ್ತೆ ಜೊತೆಗೆ ಬಂದ ಗರ್ಭಿಣಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ರಾತ್ರಿ 9.30 ಕ್ಕೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಅವಧಿ ಪೂರ್ವ ಹೆರಿಗೆ ಹಿನ್ನೆಲೆಯಲ್ಲಿ ಮಗು ಒಂದೂವರೆ ಕೆಜಿ ತೂಕ ಇತ್ತು. ತೂಕ ಕಡಿಮೆ ಆಗಿರುವ ಕಾರಣಕ್ಕೆ ವೈದ್ಯರು ಮಗುವನ್ನು ಎನ್‌ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು.
ಈ ಸಂದರ್ಭದಲ್ಲಿ ತಾಯಿಯದವಳು ಶಿಶು ಎನ್‌ಐಸಿಯುಗೆ ಶಿಫ್ಟ್ ಮಾಡಿದ ಬಳಿಕ ಆರೈಕೆ ಮಾಡಬೇಕಿದ್ದ ತಾಯಿ ಯಾರಿಗೂ ಹೇಳದೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾಳೆ. ನವಜಾತ ಹೆಣ್ಣು ಶಿಶು ಹಸಿವಿನಿಂದ ಮೂರು ದಿನಗಳ ಬಳಿಕ ಸಾವಿಗೀಡಾಗಿದೆ.ಬಿಬಿಜಾನ್ ಸಯ್ಯದ್ ಆಸ್ಪತ್ರೆಗೆ ದಾಖಲಾಗುವ ವೇಳೆ ಸರಿಯಾದ ವಿಳಾಸ ನೀಡದ ಯಾಮಾರಿಸಿದ್ದಾರೆ. ಸಧ್ಯ ಬಾಣಂತಿ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.