ಹುಬ್ಬಳ್ಳಿ : ಇಂಡಿಗೋ ವಿಮಾನಗಳ ಹರಾಟದಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ 500 ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗೀತಗೊಳಿಸಲಾಗಿದೆ. ಇದರ ಮಧ್ಯ ಹುಬ್ಬಳ್ಳಿಯಲ್ಲಿ ಇಂಡಿಗೋ ವಿಮಾನ ಹಾರಾಟ ಸ್ಥಗೀತಾಗೊಂಡ ಹಿನ್ನೆಲೆಯಲ್ಲಿ ಆನ್ಲೈನಲ್ಲಿ ಆರತಕ್ಷತೆ ಆಗಿರೋದು ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು ಇಂಡಿಗೋ ವಿಮಾನ ಹಾರಾಟದ ಹಿನ್ನೆಲೆಯಲ್ಲಿ ಇದೀಗ ಸಾಕಷ್ಟು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಹುಬ್ಬಳ್ಳಿಯಲ್ಲಿ ವಧು ವರ ಇಲ್ಲದೆ ಆರ್ಥಕ್ಷತೆ ಕಾರ್ಯಕ್ರಮ ನಡೆಯಿತು ಅದು ಅವರ ಇಲ್ಲದೆ ಕುಟುಂಬದಿಂದ ಆನ್ಲೈನ್ ಮುಖಾಂತರ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಮದು-ಮಕ್ಕಳೇ ಬರಲು ಆಗದೆ ಆನ್ಲೈನ್ ನಲ್ಲಿ ಈ ಒಂದು ಅರತಕ್ಷತೆ ಕಾರ್ಯಕ್ರಮ ನಡೆಯಿತು.
ಹುಬ್ಬಳ್ಳಿಯ ಮೇಘ ಹಾಗೂ ಭುವನೇಶ್ವರದ ಸಂಗಮದಾಸ್ ಅವರ ಮದುವೆಯಾಗಿತ್ತು. ಹುಬ್ಬಳ್ಳಿಯಲ್ಲಿ ರಿಸೆಪ್ಶನ್ ಹಮ್ಮಿಕೊಂಡಿದ್ದರು ಆದರೆ ವಿಮಾನಗಳ ಹಾರಾಟ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬರುವುದಕ್ಕೆ ಆಗಲಿಲ್ಲ ಹೀಗಾಗಿ ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಹುಡುಗ ಹುಡುಗಿ ಇಲ್ಲದೇನೇ ಆರತಕ್ಷತೆ ಕಾರ್ಯಕ್ರಮ ನಡೆಯಿತು.








