ನವದೆಹಲಿ : ಕಳೆದೆರಡು ದಿನಗಳಿಂದ ದೇಶದಲ್ಲಿ ವಿಮಾನ ಹಾರಾಟದಲ್ಲಿ ಉಂಟಾದ ವ್ಯತ್ಯಾಯದಿಂದಾಗಿ ಇಂಡಿಗೋ ಸಂಸ್ಥೆ ಗ್ರಾಹಕರಲ್ಲಿ ಕ್ಷಮೆ ಯಾಚಿಸಿದ್ದು, ಮುಂದಿನ ಕೆಲವು ದಿನಗಳು ಈ ಅಡಚಣೆ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಅಲ್ಲದೇ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟದಲ್ಲಿ ವ್ಯಾಪಕ ಅಡಚಣೆ ಎದುರಿಸುತ್ತಿರುವ ಇಂಡಿಗೋ ಸಂಸ್ಥೆ, ಈ ಕುರಿತು ತಮ್ಮ ಗ್ರಾಹಕರು ಮತ್ತು ಉದ್ಯಮ ಪಾಲುದಾರರಲ್ಲಿ ಕ್ಷಮೆಯಾಚಿಸಿದೆ.
ಕಳೆದೆರಡು ದಿನಗಳಿಂದ ಸಾಕಷ್ಟು ವಿಮಾನಗಳ ಹಾರಾಟ ರದ್ದಾಗಿದೆ. ಸಾಮಾನ್ಯಕ್ಕಿಂತ ಹೆಚ್ಚಾಗಿ ದಿನಕ್ಕೆ ಸರಿಸುಮಾರು 170ರಿಂದ 200 ವಿಮಾನಗಳು ರದ್ದಾಗಿದ್ದು, ದೇಶವ್ಯಾಪಿ ಹಲವು ವಿಮಾನ ನಿಲ್ದಾಣದಲ್ಲಿ ಈ ಅಡಚಣೆ ವರದಿಯಾಗಿದೆ. ಏಕಾಏಕಿ ವಿಮಾನಗಳ ಸಂಚಾರ ರದ್ದು ಹಾಗೂ ಪರ್ಯಾಯ ವ್ಯವಸ್ಥೆಯ ಕೊರತೆಯಿಂದಾಗಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕ್ಷಮೆಯಾಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಇಂಡಿಗೋ, ಸಮಸ್ಯೆ ಅನುಭವಿಸಿದ ಗ್ರಾಹಕರು ಮತ್ತು ನಮ್ಮ ಉದ್ಯಮದ ಪಾಲುದಾರರಲ್ಲಿ ನಾವು ಮನಃಪೂರ್ವಕ ಕ್ಷಮೆ ಯಾಚಿಸುತ್ತೇವೆ. ಇಂಡಿಗೋ ತಂಡಗಳು ಪರಿಸ್ಥಿತಿ ನಿರ್ವಹಿಸಿ, ಸಾಮಾನ್ಯ ರೀತಿ ಕಾರ್ಯಾಚರಣೆ ನಡೆಸಲು ಡಿಜಿಸಿಎ, ಬಿಸಿಎಸಿ ಮತ್ತು ಎಎಐ ಹಾಗೂ ವಿಮಾನ ವಿಮಾನ ನಿಲ್ದಾಣದ ನಿರ್ವಾಹಕರ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದೆ.
The last two days have seen widespread disruption across IndiGo’s network and operations. We extend a heartfelt apology to all our customers and industry stakeholders who have been impacted by these events. IndiGo teams are working diligently and making all efforts with the…
— IndiGo (@IndiGo6E) December 4, 2025








