ಬೆಂಗಳೂರು : ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 42 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, ಅಗತ್ಯ ತಪಾಸಣೆ ಹಾಗೂ ಇತರ ಕಾರಣಗಳಿಂದ ಫ್ಲೈಟ್ ಕ್ಯಾನ್ಸಲ್ ಮಾಡಲಾಗಿದೆ ಎಂದು ಇಂಡಿಗೋ ಮಾಹಿತಿ ನೀಡಿದೆ.
ವಿಮಾನ ಹಾರಾಟ ರದ್ದುಗೊಂಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇಂಡಿಗೋ ವಿರುದ್ಧ ಜನರು ಕಿಡಿಕಾರಿದ್ದಾರೆ. ಇದರ ಬೆನ್ನಲ್ಲೇ ಇಂಡಿಗೋ ಪ್ರತಿಕ್ರಿಯೆ ನೀಡಿದ್ದು, ಅಗತ್ಯ ತಪಾಸಣೆ ಹಾಗೂ ಕಾರ್ಯಾಚರಣೆ ಕಾರಣಗಳಿಂದ ಫ್ಲೈಟ್ ಕ್ಯಾನ್ಸಲ್ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಹೈದರಾಬಾದ್, ಮುಂಬೈ, ಚೆನ್ನೈ, ದೆಹಲಿ, ಗೋವಾ ಕೋಲ್ಕತ್ತಾ ಹಾಗೂ ಅಹಮದಾಬಾದ್‌ನಿಂದ ಬೆಂಗಳೂರಿಗೆ ಬರಬೇಕಿದ್ದ 22 ವಿಮಾನ ಹಾಗೂ ಬೆಂಗಳೂರಿನಿಂದ ಬೇರೆ ನಗರಗಳಿಗೆ ಸಂಚರಿಸಬೇಕಿದ್ದ 20 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಈ ಪೈಕಿ ಒಟ್ಟು 42 ವಿಮಾನಗಳ ಹಾರಾಟ ರದ್ದಾಗಿದೆ.








