ನವದೆಹಲಿ : ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್’ಗೆ ಹಾಕಿ ಇಂಡಿಯಾ 16 ಸದಸ್ಯರ ಬಹುನಿರೀಕ್ಷಿತ ಪುರುಷರ ತಂಡವನ್ನು ಪ್ರಕಟಿಸಿದೆ. ಮೂರನೇ ಒಲಿಂಪಿಕ್ಸ್ ಆಡಲಿರುವ ಹರ್ಮನ್ ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಸಿಂಗ್ ಉಪನಾಯಕರಾಗಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು.
ತಂಡಕ್ಕೆ ಸಂಬಂಧಿಸಿದಂತೆ, ಅನುಭವಿ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಮತ್ತು ಮಿಡ್ ಫೀಲ್ಡರ್ ಮನ್ ಪ್ರೀತ್ ಸಿಂಗ್ ಅವರು ನಾಲ್ಕನೇ ಬಾರಿಗೆ ಬೇಸಿಗೆ ಕ್ರೀಡಾಕೂಟದಲ್ಲಿ ಆಡಲಿದ್ದಾರೆ. ನಾಯಕ ಹರ್ಮನ್ಪ್ರೀತ್ ಸಿಂಗ್, ಜರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಸುಮಿತ್ ಮತ್ತು ಸಂಜಯ್ ಡಿಫೆನ್ಸ್ ಲೈನ್ನಲ್ಲಿದ್ದರೆ, ಫಾರ್ವರ್ಡ್ ಲೈನ್ನಲ್ಲಿ ಅಭಿಷೇಕ್, ಸುಖ್ಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ ಮತ್ತು ಗುರ್ಜಂತ್ ಸಿಂಗ್ ಇದ್ದಾರೆ.