ಮೈಸೂರು : ನಮ್ಮದು ಬಹುತ್ವ ರಾಷ್ಟ್ರ ಹಾಗಾಗಿ ಭಾರತ ಎಂದಿಗೂ ಹಿಂದೂ ರಾಷ್ಟ್ರ ಆಗಲ್ಲ. ಹಲವು ಕಲೆ, ಸಂಸ್ಕೃತಿ, ಭಾಷೆ ಹಾಗು ಧರ್ಮಗಳಿರುವ ದೇಶ ನಮ್ಮ ಭಾರತ. ಹಾಗಾಗಿ ಭಾರತ ಎಂದು ಹಿಂದೂ ರಾಷ್ಟ್ರ ಆಗುವುದಿಲ್ಲ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, RSS ಬಹಳ ದಿನದಿಂದ ಹಿಂದೂ ರಾಷ್ಟ್ರ ಅಂತ ಹೇಳುತ್ತಿದೆ. ಆದರೆ ಯಾವತ್ತೂ ಭಾರತ ಹಿಂದೂ ರಾಷ್ಟ್ರವಾಗುವುದಿಲ್ಲ. ಈ ಒಂದು ಹೇಳಿಕೆಗೆ ಆರ್ ಅಶೋಕ್ ತಿರುಗೇಟು ನೀಡಿದ್ದು ಹಿಂದೂ ಎನ್ನುವುದು ಒಂದು ಜೀವನ ಪದ್ಧತಿ ಅಯೋಧ್ಯೆಯಲ್ಲಿ ರಾಮಮಂದಿರ ಆಗಲ್ಲ ಅಂತ ಹೇಳುತ್ತಿದ್ದರು ಅದು ಆಯ್ತು ಜಮ್ಮು ಕಾಶ್ಮೀರದಲ್ಲಿ ವಿಶೇಷ ಕಾಯಿದೆ 370 ರದ್ದು ಮಾಡಲು ಆಗಲ್ಲ ಎನ್ನುತ್ತಿದ್ದರು.
ಕೇಂದ್ರ ಸರ್ಕಾರ ವಿಶೇಷ ಕಾಯ್ದೆ 373 ರದ್ದು ಪಡಿಸಿದೆ ಪಾಕಿಸ್ತಾನದ ಜನರು ರಾಹುಲ್ ಗಾಂಧಿಯನ್ನು ಪ್ರೀತಿಸುತ್ತಾರೆ ಪಾಕಿಸ್ತಾನದವರು ರಾಹುಲ್ ಗಾಂಧಿ ಅವರನ್ನು ಪ್ರೀತಿಸುವುದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಪಾಕಿಸ್ತಾನದಲ್ಲಿ ರಾಹುಲ್ ಗಾಂಧಿ ಫೋಟೋ ಫೇಮಸ್ ಆಗಿದೆ. ಕಳೆದ ಆರು ತಿಂಗಳಿನಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ICU ನಲ್ಲಿ ಇದೆ. ಕಾಂಗ್ರೆಸ್ ನಲ್ಲಿ ಮುಂದೆ ಯಾರು ಸಿಎಂ ಆಗುತ್ತಾರೆ ಎಂಬುದು ಗೊತ್ತಿಲ್ಲ. ಮೊದಲ ಬಾರಿ ಶಾಸಕರಾದವರು ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಆರ್ ಅಶೋಕ ವಾಗ್ದಾಳಿ ನಡೆಸಿದರು.








