ನವದೆಹಲಿ: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ದೊಡ್ಡ ಹೊಡೆತವಾಗಿದ್ದು, ಸ್ಟಾರ್ ವೇಗಿ ಮೊಹಮ್ಮದ್ ಶಮಿ ಸಂಪೂರ್ಣ ಸರಣಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗ್ತಿದೆ. ಅಂದ್ಹಾಗೆ, ಶಮಿ ಪ್ರಸ್ತುತ ಲಂಡನ್ನಲ್ಲಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ಗಳಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ.
ಕ್ರಿಕ್ಬಝ್ ವರದಿ ಮಾಡಿದಂತೆ, ಶಮಿ ಇಂಗ್ಲೆಂಡ್ ವಿರುದ್ಧದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಗಾಯಗೊಂಡ ಪಾದಕ್ಕೆ ಚುಚ್ಚುಮದ್ದಿನ ಮೂಲಕ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವೇಗದ ಬೌಲರ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ದೃಢೀಕರಣವಿಲ್ಲ.
ಇದಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಶಮಿ ಆಡಲು ಸಾಧ್ಯವಾಗುತ್ತೋ ಇಲ್ಲವೋ ಎಂಬುದು ಈಗ ಪ್ರಶ್ನೆಯಾಗಿದೆ ಎಂದು ವರದಿ ಹೇಳಿದೆ.
BREAKING : ಜ್ಞಾನವಾಪಿ ನೆಲಮಾಳಿಗೆಯಲ್ಲಿ ‘ಪೂಜೆ’ಗೆ ವಿರೋಧ, ಹೈಕೋರ್ಟ್ ಮೊರೆಯೋದ ‘ಮಸೀದಿ ಸಮಿತಿ’
BIGG NEWS : ‘CBSE’ಯಿಂದ 10, 12ನೇ ತರಗತಿಗೆ ‘ಹೊಸ ಪಠ್ಯಕ್ರಮ ಯೋಜನೆ’ ಪ್ರಸ್ತಾಪ
BIG NEWS: ನನ್ನ ಜೊತೆ ಯಾರೆಲ್ಲ ‘ಕಾಂಗ್ರೆಸ್’ ಸೇರಿದ್ರೋ ಅವರೆಲ್ಲ ‘ಬಿಜೆಪಿ’ಗೆ ವಾಪಾಸ್ ಬರ್ತಾರೆ – ಜಗದೀಶ್ ಶೆಟ್ಟರ್