ವಾಷಿಂಗ್ಟನ್ : ಬಾಹ್ಯಾಕಾಶದಲ್ಲಿ ಸಿಲುಕಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಂ ಇತ್ತೀಚಿಗೆ ಭೂಮಿಗೆ ವಾಪಸ್ ಆಗಿದ್ದರು. ಭೂಮಿಗೆ ಬಂದ ಬಳಿಕ ಸುಮಿತಾ ವಿಲಿಯಂ ಮೊದಲ ಪ್ರತಿಕ್ರಿಯೆ ನೀಡಿದ್ದು, ಬಾಹ್ಯಾಕಾಶದಲ್ಲಿ ಭಾರತ ಯಾವ ರೀತಿ ಕಾಣಿಸುತ್ತದೆ ಎಂದು ಮಾತನಾಡಿದ್ದು ಅಲ್ಲದೆ ಭಾರತ ಶ್ರೇಷ್ಠ ಪ್ರಜಾಪ್ರಭುತ್ವ ದೇಶ ಎಂದು ಕೊಂಡಾಡಿದ್ದಾರೆ.
ಅಮೇರಿಕಾದ ವಾಷಿಂಗ್ಟನ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಶೀಘ್ರದಲ್ಲೇ ನನ್ನ ತಂದೆಯ ತಾಯ್ನಾಡಿಗೆ ಭೇಟಿ ನೀಡುತ್ತೇನೆ ಎಂದು ಅಮೆರಿಕದ ವಾಷಿಂಗ್ಟನ್ ನಲ್ಲಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹೇಳಿಕೆ ನೀಡಿದ್ದಾರೆ. ಭಾರತದ ಬಗ್ಗೆ ಮಾತನಾಡಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್, ಮುಂದಿನ ಕಾರ್ಯಾಚರಣೆಯಲ್ಲಿ ಭಾಗವಹಿಸುವವರನ್ನು ಭೇಟಿ ಮಾಡುತ್ತೇನೆ.
ಭಾರತ ಶ್ರೇಷ್ಠ ಪ್ರಜಾಪ್ರಭುತ್ವ ದೇಶ. ಬಾಹ್ಯಾಕಾಶ ಜಗತ್ತಿನಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿದೆ. ಭಾರತೀಯರಿಗೆ ಸಹಾಯ ಮಾಡಲು ನಾನು ಹಿಂಜರಿಯುವುದಿಲ್ಲ. ಬಾಹ್ಯಾಕಾಶದಿಂದ ಭಾರತ ಅದ್ಭುತವಾಗಿ ಕಾಣುತ್ತದೆ. ಹಿಮಾಲಯದ ಮೇಲೆ ಹೋದಾಗಲೆಲ್ಲ ಅದ್ಭುತ ಚಿತ್ರಗಳು ಸಿಕ್ಕವು ಎಂದು ಭಾರತದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಭಾರತ ಅದ್ಭುತವಾಗಿದೆ. ನಾವು ಹಿಮಾಲಯವನ್ನು ದಾಟುವ ಪ್ರತಿ ಬಾರಿಯೂ, ಪುಟ್ಚ್ ಹಿಮಾಲಯದ ಫೋಟೋ ತೆಗೆಯುತ್ತಾರೆ. ಅದು ತುಂಬಾ ಅದ್ಭುತವಾಗಿದೆ ಎಂದು ಹೇಳಬೇಕು.ನೀವು ಪೂರ್ವದಿಂದ ಗುಜರಾತ್, ಮುಂಬೈ ಕಡೆಗೆ ಪ್ರಯಾಣಿಸುವಾಗ, ಕರಾವಳಿಯಿಂದ ಮೀನುಗಾರಿಕಾ ದೋಣಿಗಳನ್ನು ನೋಡಬಹುದು. ಅವು ಒಂದು ದೀಪಸ್ತಂಭದಂತೆ ಕಾರ್ಯನಿರ್ವಹಿಸಿ, ‘ಇಗೋ ನಾವು ಬರುತ್ತಿದ್ದೇವೆ’ ಎಂದು ತಿಳಿಸುತ್ತವೆ ಎಂದರು.
ಕಳೆದ ವರ್ಷ ಜೂನ್‌ನಲ್ಲಿ ಎಂಟು ದಿನಗಳ ಪ್ರಯಾಣಕ್ಕಾಗಿ ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸುನಿತಾ ವಿಲಿಯಮ್ಸ್ ತೆರಳಿದರು. ನೌಕೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರು ಭೂಮಿಗೆ ಮರಳುವುದು ತಡವಾಯಿತು. ಇದರಿಂದ 280 ದಿನಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದ ನಂತರ, ಕಳೆದ ಮಾರ್ಚ್‌ನಲ್ಲಿ ಸ್ಪೇಸ್ ಎಕ್ಸ್ ಸಂಸ್ಥೆಯ ಡ್ರ್ಯಾಗನ್ ನೌಕೆಯ ಮೂಲಕ ಅವರು ಭೂಮಿಗೆ ಮರಳಿದರು.