ನವದೆಹಲಿ : ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಭಾರತದ ಮೇಲೆ ದಾಳಿ ಮಾಡುತ್ತಿದ್ದು ಎಲ್ಲಾ ಡ್ರೋನ್ ಮತ್ತು ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದೆ. ಇದುವರೆಗೂ ಪಾಕಿಸ್ತಾನದ 50 ಡ್ರೋನ್ ಗಳನ್ನು ಭಾರತ ಹೊಡೆದುರುಳಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಭಾರತ 6 ಮರ್ಮಘಾತ ನೀಡಿದೆ.
ಹೌದು ಭಾರತವನ್ನು ಕೆಣಕಿದ ಪಾಕಿಸ್ತಾನಕ್ಕೆ ಭಾರತೀಯ ಸೈನಿಕರು 6 ಮರ್ಮಾಘಾತ ನೀಡಿದ್ದಾರೆ. ಪಾಕಿಸ್ತಾನದ ಕ್ಷಿಪಣಿ ದಾಳಿಗೆ ಭಾರತೀಯ ಸೈನಿಕರು ಕೂಡ ತಕ್ಕ ಪ್ರತ್ಯುತ್ತರ ನೀಡಿದ್ದು, ಇದುವರೆಗೂ ಪಾಕಿಸ್ತಾನ ಭಾರತದ ಮೇಲೆ ಎಲ್ಲಾ ರೀತಿಯಲ್ಲಿ ದಾಳಿ ಮಾಡಿದೆಯೋ, ಅವೆಲ್ಲವನ್ನು ಭಾರತೀಯ ಸೇನಾ ಪಡೆ ವಿಫಲಗೊಳಿಸಿದೆ.
1) ಪಾಕಿಸ್ತಾನದ ಫೈಟರ್ ಜೆಟ್ ಗಳು ಧ್ವಂಸವಾಗಿವೆ.
2) ಪಾರ್ಕ್ ನ AWACS ಸರ್ವೇಕ್ಷಣ ವಿಮಾನ ಧ್ವಂಸವಾಗಿದೆ.
3) ಪಾಕಿಸ್ತಾನದ 4 ಕಡೆಯ ಏರ್ ಡಿಫೆನ್ಸ್ ಸಿಸ್ಟಮ್ ಧ್ವಂಸ
4) ಪಾಕಿಸ್ತಾನದ ಡ್ರೋನ್ ಗಳನ್ನು ಸಹ ಭಾರತ ಧ್ವಂಸಗೊಳಿಸಿದೆ.
5) ಲಾಹೋರ್, ಸಿಯಾಲ್ ಕೋಟ್ ಸೇರಿ 4 ಕಡೆ ದಾಳಿ ನಡೆಸಿದೆ.
6) ಭಾರತ ಪಾಕಿಸ್ತಾನದ ಎಲ್ಲಾ ಡ್ರೋನ್ ಗಳು ಉಡೀಸ್ ಮಾಡಿದೆ.