ನವದೆಹಲಿ : ಕಳೆದ 2020ರಲ್ಲಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೊರೋನ ಮಹಾಮಾರಿ ಸೋಂಕು ಇದೀಗ ಮತ್ತೆ ವಕ್ಕರಿಸಿದ್ದು ಈಗಾಗಲೇ ಸಿಂಗಾಪುರ್ ಹಾಂಕಾಂಗ್ ನಲ್ಲಿ ಕೋರೊನಾ ಸೋಂಕು ಮತ್ತೆ ಹೆಚ್ಚಾಗಿದೆ. ಅಲ್ಲದೇ ಭಾರತದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು 2020 ರಿಂದ 22ರ ಅವಧಿಯಲ್ಲಿ ಇಡೀ ಜಗತ್ತಿನಾದ್ಯಂತ ಕೊರೋನ ಎಂಬ ಮಹಾ ಮಾರಿ ರೋಗ ಅಬ್ಬರಿಸಿತ್ತು. ಇದೀಗ ಮತ್ತೆ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಈಗಾಗಲೇ ಸಿಂಗಾಪುರ ಮತ್ತು ಹಾಂಕಾಂಗ್ ದೇಶಗಳಲ್ಲಿ ಕೋರೋನ ಸೋಂಕು ಹೆಚ್ಚಾಗಿದೆ. ಹಾಗಾಗಿ ತಜ್ಞರ ಜೊತೆಗೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಸಭೆ ನಡೆಸಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ತುರ್ತು ವೈದ್ಯಕೀಯ ಪರಿಹಾರ ವಿಭಾಗ, ವಿಪತ್ತು ನಿರ್ವಹಣಾ ಕೋಶ, ಸಂಶೋಧನಾ ಮಂಡಳಿ ಅಧಿಕಾರಿಗಳೊಂದಿಗೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅಧಿಕಾರಿಗಳು ಹಾಗು ಆರೋಗ್ಯ ಸೇವಾ ಮಹಾನಿರ್ದೇಶಕರ ನೇತೃತ್ವದಲ್ಲಿ ಸಭೆ ನಡೆದಿದೆ.