ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು ಪಾರ್ಕಿಂಗ್ ವಿಚಾರವಾಗಿ ಆಶೀರ್ವಾದ ಗಲಾಟೆ ಪಿಕೋಪಕ್ಕೆ ತಿರುಗಿ ವ್ಯಕ್ತಿ ಒಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರಿಗೆ ಚಾಕು ಇರಿದಿರುವ ಘಟನೆ, ಬೆಂಗಳೂರಿನ ಮಾರಗೊಂಡನಹಳ್ಳಿಯ ಆರ್ ಆರ್ ಲೇಔಟ್ ನಲ್ಲಿ ನಡೆದಿದೆ.
ಹೌದು ಸೆಪ್ಟೆಂಬರ್ 24ರಂದು ನಡೆದ ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವೆಂಕಟೇಶ್ ಎನ್ನುವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಘಟನೆಯಲ್ಲಿ ಹೇಮಂತ್, ಹನುಮಂತಮ್ಮ ಮತ್ತು ರಮೇಶ್ ಸೇರಿ ಓರ್ವ ಅಪ್ರಾಪ್ತ ಗಾಯಗೊಂಡಿದ್ದಾರೆ. ಆರೋಪಿ ವೆಂಕಟೇಶ್ನನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 24ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.