ಮೈಸೂರು : ರಾಜ್ಯದಲ್ಲಿ ಸಾಲು ಸಾಲು ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಇದೀಗ ಮೈಸೂರಿನಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಹಾಡು ಹಗಲೇ ಕಾರನ್ನು ಅಡ್ಡಗಟ್ಟಿ ಮುಸುಕು ದಾರಿಗಳು ದರೋಡೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಜಯಪುರ ಹೋಬಳಿಯ ಹಾರೋಹಳ್ಳಿ ಬಳಿ ಈ ಒಂದು ಬೆಚ್ಚಿಬಿಳಿಸುವ ಘಟನೆ ನಡೆದಿದೆ.
ಹೌದು ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಈ ಒಂದು ಘಟನೆ ನಡೆದಿದೆ. ಮೈಸೂರಿನಲ್ಲಿ ಕಾರು ಅಡ್ಡಗಟ್ಟಿ ಮುಸುಕು ಧಾರಿಗಳು ರಾಬರಿ ನಡೆಸಿದ್ದಾರೆ. ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಈ ಒಂದು ಘಟನೆ ನಡೆದಿದೆ. ಸುತ್ತ ಮುತ್ತ ಇನ್ನು ಅನೇಕ ವಾಹನಗಳಿದ್ದರೂ ಕೂಡ ಉಸ್ಕೊ ದಾರಿಗಳು ಲೆಕ್ಕಿಸದೆ ಕಾರಣ ಅಡಗಟ್ಟಿ ದರೋಡೆ ನಡೆಸುತ್ತಿರುವ ದೃಶ್ಯ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.
ಅಕ್ಕಪಕ್ಕದ ವಾಹನಗಳಲ್ಲಿರುವ ಜನರು ಕೂಗಾಟ ನಡೆಸುತ್ತಿದ್ದರು ಕೂಡ ಲೆಕ್ಕಿಸದೆ ದರೋಡೆಕೋರರು ಕಾರನ್ನು ಅಡ್ಡಗಟ್ಟಿ ಮಾಡಿ ದರೋಡೆ ನಡೆಸಿದ್ದಾರೆ. ಸದ್ಯ ಹಣ ಕಳೆದುಕೊಂಡ ಕಾರಿನ ವ್ಯಕ್ತಿಯನ್ನು ಪೋಲೀಸರು ವಿಚಾರಣೆ ನಡೆಸುತ್ತಿದ್ದು ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೇರಳ ಮೂಲದ ಸೂಫಿ ಎನ್ನುವ ಉದ್ಯಮಿಗೆ ಸೇರಿದ ಕಾರು ಹಾಗೂ ಅವರ ಬಳಿ ಇದ್ದಂತಹ ಹಣದ ಸಮೇತ ದರೋಡೆಕೋರರು ಎಲ್ಲವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಎರಡು ಕಾರುಗಳಲ್ಲಿ ಬಂದಂತಹ ಮುಸುಕು ದಾರಿ ದರೋಡೆ ಕೋರರು ಉದ್ಯಮಿಯನ್ನು ಕಾರಿನಿಂದ ಕೆಳಗೆ ತಳ್ಳಿ ಕಾರಿನ ಸಮೇತ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.