ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕಳೆದ ಕೆಲವು ತಿಂಗಳಗಳ ಹಿಂದೆ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ನಡೆದಿತ್ತು. ಆ ಘಟನೆಗಳಿಂದಲೇ ಜನರು ಇನ್ನೂ ಹೊರ ಬಂದಿಲ್ಲ, ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಭೀಕರ ಕೊಲೆಯಾಗಿದ್ದು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪೂಜಾರಿ ಒಬ್ಬರನ್ನು ಕೊಲೆ ಮಾಡಿದ್ದಾರೆ.
ಹೌದು ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ ಆಗಿದೆ. ಹುಬ್ಬಳ್ಳಿಯ ಈಶ್ವರನಗರದಲ್ಲಿ ವೈಷ್ಣವಿ ದೇವಸ್ಥಾನದ ಪೂಜಾರಿಯನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವಂತಹ ಘಟನೆ ಇಂದು ನಡೆದಿದೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅಲ್ಲದೆ ಇದೆ ಪೂಜಾರಿಯ ಮೇಲೆ ಕಳೆದ ಒಂದು ವರ್ಷದ ಹಿಂದೆ ಕೂಡ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದರು. ಅಂದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಇಂದು ಸಾವನ್ನಪ್ಪಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಡಿಮೆ ಸುಳ್ಳಕ್ಕೆ ನಾವಾನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ದುಷ್ಕರ್ಮಿಗಳಿಗಾಗಿ ಬಲೇ ಬೀಸಿದ್ದಾರೆ.