ಬೆಂಗಳೂರು : ಇತ್ತೀಚಿಗೆ ರಾಜ್ಯ ಸರ್ಕಾರ ಹಾಲು, ಮೊಸರು ವಿದ್ಯುತ್ ಸೇರಿದಂತೆ ಡೀಸೆಲ್ ದರ ಏರಿಕೆ ಮಾಡಿ ರಾಜ್ಯದ ಜನರಿಗೆ ದರ ಏರಿಕೆಯ ಶಾಕ್ ನೀಡಿತು. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು ಪ್ರತಿ 1 ಲೀಟರ್ ನೀರಿಗೆ 1 ಪೈಸೆ ಹೆಚ್ಚಳಕ್ಕೆ ಇದೀಗ BWSSB ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ ಹಾಗಾಗಿ ಬೆಂಗಳೂರಿನ ಜನತೆಗೆ ಇದೀಗ ಮತ್ತೊಂದು ದರ ಏರಿಕೆಯ ಶಾಕ್ ಎದುರಾಗಿದೆ.
ಈ ಕುರಿತು BWSSB ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಅವರು ಮಾಹಿತಿ ನೀಡಿದ್ದು ನೀರಿನ ಬೆಲೆ ಹೆಚ್ಚಿಸಲು ಬೆಂಗಳೂರು ಜಲ ಮಂಡಳಿ ನಿರ್ಧರಿಸಿದೆ.ಒಂದು ಲೀಟರ್ ನೀರಿಗೆ ಗರಿಷ್ಠ 1 ಪೈಸೆ ಹೆಚ್ಚಳಕ್ಕೆ ಬಿಡಬ್ಲ್ಯೂಎಸ್ಎಸ್ಬಿ ನಿರ್ಧಾರ ಕೈಗೊಂಡಿದೆ. ಗೃಹ ಬಳಕೆ ಬಳಕೆ ನೀರು ಸಂಪರ್ಕ ಒಂದು ಲೀಟರ್ 1 ಪೈಸೆ ಹೆಚ್ಚಳ, 8,000 ಲೀಟರ್ ಒಳಗಿನ ನೀರು ಸಂಪರ್ಕಕ್ಕೆ 0.15 ಹೆಚ್ಚಳ 8 ರಿಂದ 25 ಸಾವಿರಕ್ಕೆ 0.40 ಪೈಸೆ ಹೆಚ್ಚಳ 20 ರಿಂದ 25 ಸಾವಿರ ಲೀಟರ್ ನೀರಿಗೆ 0.80 ಪೈಸೆ ಹೆಚ್ಚಳ 50 ರಿಂದ್ 1 ಲಕ್ಷದವರೆಗೆ ನೀರು ಬಳಕೆಗೆ 1 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಿದೆ.
ಇನ್ಮುಂದೆ ಪ್ರತಿ ವರ್ಷ ಏಪ್ರಿಲ್ 1 3 ಪರ್ಸೆಂಟ್ ಹೆಚ್ಚಳ ಮಾಡಲಾಗುತ್ತದೆ ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ ಪ್ರಸಾದ್ ಮನೋಹರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಬಿಡಬ್ಲ್ಯೂಎಸ್ಎಸ್ಬಿ ಗ್ರಾಹಕರಿಗೆ 20 ರಿಂದ 30 ರೂಪಾಯಿ ಹೊರೆಯಾಗಲಿದೆ. ಇನ್ಮುಂದೆ ನೀರು ಪ್ರತಿ ತಿಂಗಳು 20ರಿಂದ 30 ರೂಪಾಯಿ ದುಬಾರಿ ಆಗಲಿದೆ. ವಾಣಿಜ್ಯ ಬಳಕೆದಾರರಿಗೆ 50 ಮತ್ತು 60ರೂ. ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ ಗೃಹ ಬಳಕೆ ಮತ್ತು ವಾಣಿಜ್ಯ ದರ 50ರಿಂದ 100 ರೂಪಾಯಿಗಳಿಗೆ ಹೆಚ್ಚಳವಾಗುವ ಸಾಧ್ಯತೆ ಈ ಕುರಿತು ಬೆಂಗಳೂರು ಜಲ ಮಂಡಳಿಯಿಂದ ಅಧಿಕೃತ ಪ್ರಕಟಣೆ ಒಂದೇ ಬಾಕಿ ಇದೆ.