ರಾಯಚೂರು : ರಾಜ್ಯದಲ್ಲಿ ಕಾಮಾಂಧರ ಅಟ್ಟಹಾಸ ಮಿತಿಮೀರುತ್ತಿದ್ದು ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ.ಇದೀಗ ರಾಯಚೂರಲ್ಲಿ ಖಾಸಗಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.
ಹೌದು ಖಾಸಗಿ ಶಾಲೆಯ 2ನೇ ವಿದ್ಯಾರ್ಥಿನಿ ಮೇಲೆ ಕಾಮುಕನೋರ್ವ ಅತ್ಯಾಚಾರ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ನಡೆದಿದೆ. ಪೋತ್ನಾಳ್ ಗ್ರಾಮದ ಖಾಸಗಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಕಾಮುಕ ಶಿವನಗೌಡನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರತಿದಿನ ಊರಿನಿಂದ ಶಾಲೆಗೆ ಸ್ಕೂಲ್ ಬಸ್‌ನಲ್ಲಿ ತೆರಳುತ್ತಿದ್ದ ಬಾಲಕಿ. ಬಂಧಿತ ಆರೋಪಿ ಶಿವನಗೌಡ ಎಂಬಾತ ಅದೇ ಊರಿನವನಾಗಿದ್ದು ಬಾಲಕಿಗೆ ಪರಿಚಿತನಾಗಿದ್ದಾನೆ. ಮಧ್ಯಾನ ಶಾಲೆಗೆ ಬರುತ್ತಿದ್ದ ಆರೋಪಿ ಊಟದ ಸಮಯಕ್ಕೆ ಬಾಲಕಿಯನ್ನ ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ಹೊರಗಡೆ ಕರೆದೊಯ್ದ ವೇಳೆ ಆರೋಪಿ ಶಿವನಗೌಡ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.