ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಅಳಿಯನೇ ತನ್ನ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಪಂ ವ್ಯಾಪ್ತಿಯ ಒಕ್ಕಲಕೊಪ್ಪದಲ್ಲಿ ನಡೆದಿದೆ. ಆರೋಪಿಯನ್ನು ಕೊಲೆ ನಡೆದ 24 ಗಂಟೆಯೊಳಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಕ್ಕಲಕೊಪ್ಪದ ಬಸವರಾಜ ಮುಟ್ಟಪ್ಪ ನಾಯ್ಕ (42) ಕೊಲೆ ಮಾಡಿದ ಆರೋಪಿ. ಆರೋಪಿಯ ಪತ್ನಿಯ ತಾಯಿ ಕಮಲಾ ನಾರಾಯಣ ನಾಯ್ಕ (70) ಕೊಲೆಯಾದವಳು. ಸಣ್ಣ ಪುಟ್ಟ ಜಗಳದ ಹಿನ್ನೆಲೆಯಲ್ಲಿ, ಅತ್ತೆಯನ್ನೇ ಮುಟ್ಟಪ್ಪ ಹತ್ಯೆ ಮಾಡಿದ್ದಾನೆ. ಗುರುವಾರ ರಾತ್ರಿ ಘಟನೆ ಜರುಗಿದ್ದು, ನಿನ್ನೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನನ್ನ ಪತಿ ಬಸವರಾಜ್ ದಿನಾಲು ನನ್ನ ಜೊತೆ ಗಲಾಟೆ ಮಾಡುತ್ತಿದ್ದ ನಿನ್ನೆ ಕೂಡ ಗಲಾಟೆ ನಡೆದಿದ್ದು, ಈ ವೇಳೆ ನನ್ನ ಪತಿ ಬಸವರಾಜ್ ನನ್ನ ತಾಯಿಯ ಮೇಲೆ ಬೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಹಾಗಾಗಿ ಆತನನ್ನು ಅರೆಸ್ಟ್ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ನಿ ಗೀತಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಈ ಹಿನ್ನೆಲೆ ಪೊಲೀಸರು ಆರೋಪಿ ಬಸವರಾಜನನ್ನ ಇದೀಗ ಅರೆಸ್ಟ್ ಮಾಡಿದ್ದಾರೆ.