ತುಮಕೂರು : ತುಮಕೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಗಲ್ಸ್ ಸ್ಟೋರ್ ಗೆ ಹಾಗು ಬೇಕರಿಗೆ ಲಾರಿಯೊಂದು ನುಗ್ಗಿದೆ. ಪರಿಣಾಮ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.
ತುಮಕೂರು ತಾಲೂಕಿನ ಕೊಳ್ಳಲ ಸರ್ಕಲ್ ನಲ್ಲಿ ಒಂದು ಘಟನೆ ನಡೆದಿದೆ. ಮೃತರನ್ನು ರಂಗಧಾಮಯ್ಯ (65) ಬೈಲಪ್ಪ (65) ಎಂದು ತಿಳಿದು ಬಂದಿದೆ. ಗಾಯಗೊಂಡ ನಾಲ್ವರಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೊಳ್ಳಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.