Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರ ತಾಲ್ಲೂಕು ಕಚೇರಿಯಲ್ಲಿ ನಕಲಿ ದಾಖಲೆ ದಂಧೆ: ಸಚಿವರೇ ಬನ್ನಿ, ತನಿಖೆ ನಡೆಸಿ- ರೈತ ಸಂಘ ಆಗ್ರಹ

18/04/2026 9:43 PM

ಮಹಿಳಾ ಮೀಸಲು ಮಸೂದೆ ಸೋಲು; ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಪ್ರತಿಭಟನೆ

18/04/2026 9:26 PM

BREAKING: ಇಂದು ದೇಶವನ್ನ ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಭಾಷಣದ ಸಂಪೂರ್ಣ ಹೈಲೈಟ್ಸ್ ಇಲ್ಲಿದೆ | PM Modi Speech

18/04/2026 9:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ, ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್
KARNATAKA

BREAKING : ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ, ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್

By kannadanewsnow0517/04/2026 4:08 PM

ಬೆಂಗಳೂರು : ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದು, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 16 ಆರೋಪಿಗಳಿಗೂ ಜೀವಾವಧಿ ಶಿಕ್ಷೆ ನೀಡಿ ಕೋರ್ಟ್ ತೀರ್ಪು ಪ್ರಕಟಿಸಿದೆ.

ಪ್ರಕರಣ ಹಿನ್ನೆಲೆ

ಜೂನ್ 15 2016 ರಂದು ಯೋಗೇಶ್ ಗೌಡ ಕೊಲೆ ನಡೆಯಿತು. ಉದಯ ಜಿಮ್ ನಲ್ಲಿ ಯೋಗೀಶ್ ಗೌಡ ಕೊಲೆ ಆಯಿತು. ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿ ಈ ಒಂದು ಕೊಲೆ ನಡೆದಿತ್ತು. ಆರಂಭದಲ್ಲಿ ಧಾರವಾಡ ಉಪನಗರ ಠಾಣೆ ಪೋಲೀಸರು ತನಿಖೆ ನಡೆಸಿದರು. ಈ ವೇಳೆ ಯೋಗೇಶ್ ಕುಟುಂಬ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದರು. ಮೊದಲು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 6 ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಒಂದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.

ಕೊಲೆ ಮಾಡಿದ್ದು 7 ಆರೋಪಿಗಳು ಅಂತ ಸಿಬಿಐ ತನಿಖೆಯಲ್ಲಿ ಬಹಿರಂಗವಾಯಿತು. ಪ್ರಕರಣದಲ್ಲಿ ಸಿಬಿಐನಿಂದ 750ಕ್ಕೂ ಹೆಚ್ಚು ಜನರ ವಿಚಾರಣೆ ನಡೆದಿದೆ. ಬಳಿಕ ನವೆಂಬರ್ 5 2020 ರಂದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಬಂಧನವಾಯಿತು. 9 ತಿಂಗಳು ಬೆಳಗಾವಿಯ ಹಿಂಡಲಗಾ ಜಿಲ್ಲೆನಲ್ಲಿ ವಿನಯ್ ಕುಲಕರ್ಣಿ ಇದ್ದರು. ಆಗಸ್ಟ್ 1321 ರಂದು ಸುಪ್ರೀಂ ಕೋರ್ಟ್ ಇಂದ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕಿತು. ಧಾರವಾಡ ಜಿಲ್ಲೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿತ್ತು. ಜಾಮೀನು ಸಿಕ್ಕರು ವಿನಯ್ ಕುಲಕರ್ಣಿಗೆ ಧಾರವಾಡಕ್ಕೆ ಎಂಟ್ರಿ ಇರಲಿಲ್ಲ.

ಈ ವೇಳೆ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿಯಿಂದ ಸ್ಪೋಟಕವಾದ ಹೇಳಿಕೆ ಬಂದಿತ್ತು. ತನ್ನನ್ನೇ ಕೊಲೆ ಮಾಡಲು ವಿನಯ್ ಕುಲಕರ್ಣಿ ಸಂಚು ರೂಪಿಸಿದ್ದರು ಎಂದು ಗಂಭೀರವಾದ ಆರೋಪ ಮಾಡಿದ್ದ. ಎರಡು ಬಾರಿ ತನ್ನನ್ನು ಕೊಲ್ಲಲು ವಿನಯ್ ಕುಲಕರ್ಣಿ ಪ್ಲಾನ್ ಹಾಕಿದ್ದರು ಎಂದು ಆರೋಪಿಸಿದ್ದ. ಇದರಿಂದಾಗಿ ಮಾಫೀಸಾಕ್ಷಿ ಯನ್ನಾಗಿ ಮಾಡಲು ಬಸವರಾಜ್ ಮುತ್ತಗಿ ಸಿದ್ದನಾಗಿದ್ದ. ಮೊದಲನೇ ಆರೋಪಿಯೇ ಮಾಫಿ ಸಾಕ್ಷಿಯಾಗಲು ಸಿದ್ಧನಾಗಿದ್ದ ಮುತ್ತಗಿ ಸಾಕ್ಷಿ ಇಂದಾಗಿ ವಿನಯ್ ಕುಲಕರಣಿಗೆ ಕಂಟಕ ಹೆಚ್ಚಾಗಿತ್ತು.

ಈ ಹಿನ್ನಲೆ ವಿನಯ್ ಕುಲಕರ್ಣಿ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದರು. ಬಸವರಾಜ ಮುತ್ತಗಿ ಮಾಫಿ ಸಾಕ್ಷಿಗೆ ಸುಪ್ರೀಂ ಕೋರ್ಟ್ ಇದೆ ಸಂದರ್ಭದಲ್ಲಿ ಒಪ್ಪಿಗೆ ಸಹ ನೀಡಿತು. ಸುಮಾರು 10, 000 ಪುಟಗಳ ಚಾರ್ಜ್ ಶೀಟನ್ನು ಸಿಬಿಐ ಸಲ್ಲಿಸಿತ್ತು. ಇದಾದ ಬಳಿಕ ಮತ್ತೆ ವಿನಯ್ ಕುಲಕರ್ಣಿ ಸಂಕಷ್ಟಕ್ಕೆ ಸಿಲುಕಿದ್ದರು. ಸಾಕ್ಷಿಗಳಿಗೆ ಆಮಿಷ ಒಡ್ಡಿದ ಆರೋಪವನ್ನು ಸಿಬಿಐ ಹೊರಸಿತ್ತು. ದಾಖಲೆಗಳೊಂದಿಗೆ ಸಿ ಬಿ ಐ ಕೋರ್ಟ್ ಮೊರೆ ಹೋಗಿತ್ತು ಸಿಬಿಐ ಮನವಿಯನ್ನು ಸುಪ್ರೀಂಕೋರ್ಟ್ ಇದೆ ಸಂದರ್ಭದಲ್ಲಿ ಪುರಸ್ಕರಿಸಿತ್ತು.

ಜೂನ್ 6 2025ರಂದು ಇಬ್ಬರ ಜಾಮೀನು ರದ್ದುಗೊಳಿಸಿ, ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು. ಒಂದು ವಾರದ ಒಳಗಾಗಿ ಪೊಲೀಸರಿಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು. ಆದೇಶದ ಪ್ರಕಾರ ಮತ್ತೆ ವಿನಯ್ ಕುಲಕರ್ಣಿ 8 ತಿಂಗಳು ಜೈಲು ಸೇರಿದ್ದರು. ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿದ ಬಳಿಕ ಮತ್ತೆ ಜಾಮೀನು ಸಿಕ್ಕಿತ್ತು. ಇದೀಗ ಮೊನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿನಯ್ ಕುಲಕರ್ಣಿ ಸೇರಿ 17 ಆರೋಪಿಗಳು ದೋಷಿ ಎಂದು ತೀರ್ಪು ಪ್ರಕಟಿಸಿದೆ. ಇದರ ಬೆನ್ನಲ್ಲೇ ಇಂದು ಶಾಸಕ ವಿನಯ್ ಕುಲಕರಣಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

Share. Facebook Twitter LinkedIn WhatsApp Email

Related Posts

ಸಾಗರ ತಾಲ್ಲೂಕು ಕಚೇರಿಯಲ್ಲಿ ನಕಲಿ ದಾಖಲೆ ದಂಧೆ: ಸಚಿವರೇ ಬನ್ನಿ, ತನಿಖೆ ನಡೆಸಿ- ರೈತ ಸಂಘ ಆಗ್ರಹ

18/04/2026 9:43 PM2 Mins Read

ಮಹಿಳಾ ಮೀಸಲು ಮಸೂದೆ ಸೋಲು; ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಪ್ರತಿಭಟನೆ

18/04/2026 9:26 PM2 Mins Read

ದೆಹಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಸಕ್ಸಸ್, ಸಂಪುಟ ಪುನರ್ ರಚನೆ ಫಿಕ್ಸ್ ಎಂದ ಶಾಸಕ ಗೋಪಾಲಕೃಷ್ಣ ಬೇಳೂರು

18/04/2026 8:34 PM2 Mins Read
Recent News

ಸಾಗರ ತಾಲ್ಲೂಕು ಕಚೇರಿಯಲ್ಲಿ ನಕಲಿ ದಾಖಲೆ ದಂಧೆ: ಸಚಿವರೇ ಬನ್ನಿ, ತನಿಖೆ ನಡೆಸಿ- ರೈತ ಸಂಘ ಆಗ್ರಹ

18/04/2026 9:43 PM

ಮಹಿಳಾ ಮೀಸಲು ಮಸೂದೆ ಸೋಲು; ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಪ್ರತಿಭಟನೆ

18/04/2026 9:26 PM

BREAKING: ಇಂದು ದೇಶವನ್ನ ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಭಾಷಣದ ಸಂಪೂರ್ಣ ಹೈಲೈಟ್ಸ್ ಇಲ್ಲಿದೆ | PM Modi Speech

18/04/2026 9:22 PM

​’ಮಹಿಳೆಯರು ಇದನ್ನು ಎಂದಿಗೂ ಮರೆಯಲ್ಲ’: ವಿಧೇಯಕ ಸೋಲಿಸಿ ಸಂಭ್ರಮಿಸಿದ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಕಿಡಿ

18/04/2026 9:14 PM
State News
KARNATAKA

ಸಾಗರ ತಾಲ್ಲೂಕು ಕಚೇರಿಯಲ್ಲಿ ನಕಲಿ ದಾಖಲೆ ದಂಧೆ: ಸಚಿವರೇ ಬನ್ನಿ, ತನಿಖೆ ನಡೆಸಿ- ರೈತ ಸಂಘ ಆಗ್ರಹ

By kannadanewsnow0918/04/2026 9:43 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಕಚೇರಿಯ ಕಂದಾಯ ಇಲಾಖೆಯಲ್ಲಿ ಸರ್ಕಾರಿ ಭೂಮಿಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವ…

ಮಹಿಳಾ ಮೀಸಲು ಮಸೂದೆ ಸೋಲು; ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಪ್ರತಿಭಟನೆ

18/04/2026 9:26 PM

ದೆಹಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಸಕ್ಸಸ್, ಸಂಪುಟ ಪುನರ್ ರಚನೆ ಫಿಕ್ಸ್ ಎಂದ ಶಾಸಕ ಗೋಪಾಲಕೃಷ್ಣ ಬೇಳೂರು

18/04/2026 8:34 PM

ಸಾಗರದ ‘ಮಾರಿಗುಡಿ ನೂತನ ಸಮಿತಿ’ಗೆ ‘ಸರ್ಕಾರಿ ನೌಕರರ ಸಂಘ’ದಿಂದ ಸನ್ಮಾನ, ಅಭಿನಂದನೆ

18/04/2026 8:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.