ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಲ್ಲಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಿತು. ವರದಿಯಲ್ಲಿ ಕೋವಿಡ್ ಆದವರಿಗೆ ಹೃದಯಘಾತ ಆಗಿದ್ದು ಕಂಡು ಬಂದಿದೆ. ಆದರೆ ಲಸಿಕೆಯಿಂದ ಹೃದಯಘಾತವಾಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕೋವಿಡ್ ಪರಿಣಾಮ ಸಾರ್ವಜನಿಕರ ಮೇಲೆ ಆಗಿದೆ. ಸ್ವಲ್ಪ ಮಟ್ಟಿಗೆ ಹೃದಯಾಘಾತ ಹೆಚ್ಚಾಗಿದೆ. ಆದರೆ ಕೋವಿಡ್ ಲಸಿಕೆ ಇದಕ್ಕೆ ಕಾರಣವಲ್ಲ. MRNA ವಾಕ್ಸಿನ್ ಬಗ್ಗೆ ಸ್ವಲ್ಪ ಅನುಮಾನ ಇದೆ. ಕೋವಿಡ್ ನ ಸಿಕೆಯಿಂದ ನಮ್ಮ ಜನರಿಗೆ ಅನುಕೂಲ ಆಗಿದೆ. ಸಡನ್ ಡೆತ್ ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡುತ್ತೇವೆ. ಹೃದಯಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯ. ಹೃದಯಾಘಾತ ಸಂಬಂಧ ಸಂಶೋಧನೆಗೆ ಸಿಎಂ ಸಿದ್ದರಾಮಯ್ಯ ಆದೇಶ ನೀಡಿದ್ದರು.
ಕೋವಿಡ್ ಹಾಗೂ ಕೋವಿಡ್ ಲಸಿಕೆಯ ದುಷ್ಪರಿಣಾಮ ಏನು? ಲಸಿಕೆಯಿಂದ ಹೃದಯಾಘಾತ ಆಗುತ್ತಿದೆಯಾ ಎಂಬುವುದರ ಬಗ್ಗೆ ವರದಿ ಕೇಳಿದ್ದರು. ಇಲಾಖೆಯ ಮುಖ್ಯ ಕಾರ್ಯದರ್ಶಿ ತಾಂತ್ರಿಕ ಸಲಹಾ ಸಮಿತಿ ಕೂಡ ರಚನೆ ಮಾಡಿದರು.ಡಾಕ್ಟರ್ ರವೀಂದ್ರನಾಥ್ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿತ್ತು. ಕೋವಿಡ್ ಪಾಸಿಟಿವ್ ಬಂದವರಲ್ಲಿ ಕೆಲವರಿಗೆ ಹೃದಯಘಾತವಾಗಿದೆ.
ಆದರೆ ಇದು ಲಸಿಕೆಯಿಂದ ಅಲ್ಲ ಕೋವಿಡ್ ನಿಂದ ಆಗಿರುವುದು ಕೋವಿಡ್ ಗಿಂತ ಮುಂಚೆ ಕೋವಿಡ್ ಆದ್ಮೇಲೆ ಸಾಕಷ್ಟು ಬದಲಾವಣೆ ಆಗಿದೆ ಒಬೆಸಿಟಿ ಡಯಾಬಿಟಿಸ್ ಎಲ್ಲವೂ ಹೆಚ್ಚಾಗಿ ಕಂಡುಬಂದಿದೆ ಈ ಕಾರಣದಿಂದ ಪರಿಣಾಮ ಸಾರ್ವಜನಿಕರಿಗೆ ಆಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.