ಬೆಂಗಳೂರು : ಇಷ್ಟು ದಿನ ಸೆಲೆಬ್ರಿಟಿಗಳು ರಾಜಕಾರಣಿಗಳು ಹಾಗೂ ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ವಂಚನೆ ಎಸಗುತ್ತಿದ್ದ ಖದೀಮರು ಇದೀಗ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಅವರ ಹೆಸರಿನಲ್ಲಿ ಕೂಡ ನಕಲಿ ಫೇಸ್ಬುಕ್ ಖಾತೆ ತೆರೆದು ವಂಚನೆಗೆ ಯತ್ನಿಸಿದ್ದಾರೆ ಈ ಕುರಿತು ಬೆಂಗಳೂರು ಕೇಂದ್ರ ಪೊಲೀಸ್ ಠಾಣೆಯಲ್ಲಿ FIR ಸಹ ದಾಖಲಾಗಿದೆ.
ಹೌದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರಿಗೂ ನಕಲಿ ಫೇಸ್ಬುಕ್ ಖಾತೆ ಬಿಸಿ ತಟ್ಟಿದ್ದು, ರಾಜ್ಯಪಾಲರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ವಂಚನೆ ಎಸಗಲಾಗಿದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭು ಅವರು ಇದೀಗ ಬೆಂಗಳೂರು ಕೇಂದ್ರ ಸೈಬರ್ ಠಾಣೆಗೆ ದೂರು ನೀಡಿದ್ದು, FIR ಸಹ ದಾಖಲಾಗಿದೆ. ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆಯೇ ಸೆಕ್ಷನ್ 66 (ಸಿ) ಅಡಿ ಇದೀಗ ಕೇಸ್ ದಾಖಲಾಗಿದೆ. ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.