ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಈಗಾಗಲೇ ನೂರಾರು ಅಪರಿಚಿತ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ತೀವ್ರ ಶೋಧಕಾರ್ಯ ಮುಂದುವರಿಸಿದ್ದಾರೆ. ಇದೀಗ 1986 ರಲ್ಲಿ ಪದ್ಮಲತಾ ಎಂಬ ಮಹಿಳೆ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಸಹೋದರಿ ಎಸ್ಐಟಿಗೆ ದೂರು ಸಲ್ಲಿಸಿದ್ದು ಮರುತನಿಕೆಗೆ ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.
ಹೌದು ಪದ್ಮಲತಾ ಅಸಹಜ ಸಾವು ಕೇಸ್ ಮರು ತನಿಖೆಗೆ ಒತ್ತಾಯ ಕೇಳಿಬಂದಿದ್ದು, 1986 ರಲ್ಲಿ ಕೋಲಾರದಿಂದ ಧರ್ಮಸ್ಥಳಕ್ಕೆ ಬಂದಿದ್ದರು ಆದರೆ ಈ ವೇಳೆ ಪದ್ಮಲತಾ ಏಕಾಏಕಿ ನಾಪತ್ತೆಯಾಗಿದ್ದರು ಬಳಿಕ 58 ದಿನಗಳ ನಂತರ ಪದ್ಮಲತಾ ನೇತ್ರಾವತಿ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತಿಯಾಗಿತ್ತು. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬೋಳಿಯರು ನಿವಾಸಿಯಾಗಿರುವ ಪದ್ಮಲತಾ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದೀಗ ಅವರ ಸಹೋದರಿ ಇಂದ್ರಾವತಿ ಪ್ರಕರಣದ ಮರುತನಿಕೆ ಆಗಬೇಕು ಎಂದು SIT ಗೆ ದೂರು ನೀಡಿದ್ದಾರೆ.