ಬೆಂಗಳೂರು : ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಆಪರೇಷನ್ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಐಪಿಎಸ್ ಅಧಿಕಾರಿ ಮಗಳು ಹಾಗೂ ನಟಿ ರನ್ಯಾರಾವ್ ಅವರು ದುಬೈ ನಿಂದ ಸುಮಾರು 14.8 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುವಾಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ ಆರ್ ಐ ಅಧಿಕಾರಿಗಳ ಕೈಗೆ ಸಿಗಿಬಿದ್ದಿದ್ದಾರೆ. ಇದೀಗ ಅಧಿಕಾರಿಗಳು ಅವರನ್ನು ಅರೆಸ್ಟ್ ಮಾಡಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.
ಹೌದು 12 ಕೋಟಿ ಮೌಲ್ಯದ ಗೋಲ್ಡ್ ಸ್ಮರ್ಲಿಂಗ್ ಗೆ ಯತ್ನ ನಡೆಸಿದ್ದು,, ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಆಪರೇಷನ್ ನಡೆದಿದೆ. ಡಿ ಆರ್ ಐ ಅಧಿಕಾರಿಗಳು ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ಮಗಳನ್ನು ಬಂಧಿಸಿದ್ದಾರೆ.14.8 ಕೆಜಿ ಚಿನ್ನ ಸಾಗಿಸುತ್ತಿದ್ದ ನಟಿ ರನ್ಯಾ ರಾವ್ ದುಬೈ ನಿಂದ ಬೆಂಗಳೂರಿಗೆ ಬಂದಾಗ ನಟಿ ಲಾಕ್ ಆಗಿದ್ದಾರೆ.ನಿನ್ನೆ ರಾತ್ರಿ ನಟಿಯನ್ನು ದೆಹಲಿ ಅಧಿಕಾರಿಗಳು ಬಂಧಿಸಿದ್ದಾರೆ. 12 ಕೋಟಿ ಮೌಲ್ಯದ ಗೋಲ್ಡ್ ಸ್ಮಗ್ಲಿಂಗ್ ಗೆ ಯತ್ನಿಸಿದ್ದು ಇದೇ ಮೊದಲ ಬಾರಿ ರಾಜ್ಯದ ಇತಿಹಾಸದಲ್ಲಿ ಅತಿ ದೊಡ್ಡ ಆಪರೇಷನ್ ಆಗಿದೆ.
ರನ್ಯಾ ರಾವ್ ಅನೇಕ ಬಾರಿ ದುಬೈಗೆ ಹೋಗಿ ಬರುತ್ತಿದ್ದರು. ನಾನು ಡಿಜಿ ಮಗಳು ಎಂದು ಹೇಳುತ್ತಿದ್ದ ರನ್ಯಾರಾವ್. ಹಾಗಾಗಿ ಪೊಲೀಸ್ ಅಧಿಕಾರಿಗಳು ಅವರನ್ನು ಚೆಕ್ ಮಾಡುತ್ತಿರಲಿಲ್ಲ. ದೇವನಹಳ್ಳಿಯಲ್ಲಿ ಅಧಿಕಾರಿಗಳು ಚೆಕ್ ಮಾಡುತ್ತಿರಲಿಲ್ಲ. ದುಬೈಗೆ ಹೋಗಿ ಬರುತ್ತಿದ್ದರಿಂದ ರನ್ಯಾ ಬಗ್ಗೆ ಡಿ ಆರ್ ಐ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ನಟಿ ಹಿಂದೆ ಡಿ ಆರ್ ಐ ಅಧಿಕಾರಿಗಳು ಬಿದ್ದು, ನಿನ್ನೆ ರಾತ್ರಿ ಉಡುಪಿನಲ್ಲಿ 14.08 ಕೆಜಿ ಬಂಗಾರ ಪತ್ತೆಯಾಗಿದೆ. ಹಾಗಾಗಿ ಅನೇಕ ಬಾರಿ ಅಕ್ರಮವಾಗಿ ರನ್ಯಾ ರಾವ್ ಚಿನ್ನ ಸಾಗಣೆ ಮಾಡಿದ್ದಾರೆ ಎನ್ನಲಾಗಿದೆ.
ಯಾರಿಗೂ ಅನುಮಾನ ಬಾರದಂತೆ ಚಿನ್ನ ಧರಿಸುತ್ತಿದ್ದ ನಟಿ ಮೈ ಮೇಲೆ ಚಿನ್ನ ಹಾಕಿಕೊಂಡು ರಮ್ಯಾ ಅವರು ಬರುತ್ತಿದ್ದಳಂತೆ ಹೊರಗೆ ಬರುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡುತ್ತಿದ್ದಳು. ಪೊಲೀಸರೇ ನಟಿ ರನ್ಯಾ ರಾವ್ ಳನ್ನು ಕರೆದೊಯ್ಯುತ್ತಿದ್ದರು ಎನ್ನುವ ಅನುಮಾನ ವ್ಯಕ್ತವಾಗಿದೆ. ಬೆಂಗಳೂರು ಅಧಿಕಾರಿಗಳ ಮೇಲೆ ಡಿ ಆರ್ ಐ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.