ಶಿವಮೊಗ್ಗ : ನೇಣು ಬಿಗಿದ ಸ್ಥಿತಿಯಲ್ಲಿ 6ನೇ ತರಗತಿ ವಿದ್ಯಾರ್ಥಿನಿಯ ಶವ ಶವ ಪತ್ತೆಯಾಗಿದೆ. ಮನೆಯಲ್ಲಿ ಜೀವಿತ (12) ಎನ್ನುವ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಿವಮೊಗ್ಗದ ಬೊಮ್ಮನಕಟ್ಟೆ ಪ್ರದೇಶದ ಎ ಬ್ಲಾಕ್ ನಲ್ಲಿ ಒಂದು ಘಟನೆ ನಡೆದಿದೆ.
ಬೊಮ್ಮನಕಟ್ಟೆಯ ಶಾಲೆಯಲ್ಲಿ ಜೀವಿತ ಆರನೇ ತರಗತಿ ಓದುತ್ತಿದ್ದಳು ರಜೆ ಇದ್ದ ಕಾರಣ ವಿದ್ಯಾರ್ಥಿ ಜೀವಿತ ಮನೆಯಲ್ಲಿಯೇ ಇದ್ದಳು. ಬಾಲಕಿ ಜೀವಿತ ಸಾವಿನ ಬಗ್ಗೆ ಹಲವಾರು ಅನುಮಾನ ವ್ಯಕ್ತವಾಗುತ್ತಿದೆ. ಬಾಲಕಿಯ ತಾಯಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








