ಶಿವಮೊಗ್ಗ : ಶಿವಮೊಗ್ಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್ ಗೆ ವೇಗವಾಗಿ ಬಂದು ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಮೇಲಿದ್ದ ತಾಯಿ ಮಗು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಬಳಿ ಈ ಒಂದು ರಸ್ತೆ ಅಪಘಾತ ಸಂಭವಿಸಿದೆ.
ತಾಯಿ ಆಸ್ಮ ಬಾನು (30) ಹಾಗೂ ಮಹಮ್ಮದ್ ಕಬೀರ್ (3) ಮೃತ ದುರ್ದೈವಿಗಳು. ಇನ್ನು ಪತಿ ಖಲಂದರ್ ಪಾಶಾ ಮತ್ತು ಮತ್ತು ಇನ್ನೊರ್ವ ಮಗು ಪ್ರಾಣಾಯಾಪಾಯದಿಂದ ಪಾರಾಗಿದ್ದಾರೆ.ತರೀಕೆರೆಯ ಬುಕ್ಕಂಬೂದಿಯಿಂದ ಸಾಗರಕ್ಕೆ ತೆರಳುತ್ತಿರುವಾಗ ಈ ಒಂದು ಅಪಘಾತ ಸಂಭವಿಸಿದೆ.
ದ್ವಿಚಕ್ರ ವಾಹನಕ್ಕೆ ವೇಗವಾಗಿ ಖಾಸಗಿ ಬಸ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ತಕ್ಷಣ ತಾಯಿ ಮಗವನ್ನು ಆನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.