ರಾಯಚೂರು : ರಾಯಚೂರಿನಲ್ಲಿ ನಿನ್ನೆ ರಾತ್ರಿ ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ. ವಾರ್ಡನ್ ಸರಿಯಾಗಿ ಬೇಯಿಸದೆ ಕಳಪೆ ಆಹಾರ ನೀಡುತ್ತಿರುವುದು ಆರೋಪ ಕೇಳಿ ಬಂದಿದೆ. ವಾರ್ಡನ್ ದೇವರಾಜ್ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ತನ್ನ ವಿರುದ್ಧ ದೂರು ನೀಡಿದರೆ ಹೊರಗಿನವರನ್ನು ಕರೆಸಿ ಥಳಿಸುವ ಬೆದರಿಕೆ ಹಾಕಿದ್ದಾರೆ. ವಾರ್ಡನ್ ದೇವರಾಜ್ ಹಾಗು ಅಧಿಕಾರಿ ಸಿಂಧೂಗೆ ವೀರಪ್ಪ ತರಾಟೆ ತೆಗೆದುಕೊಂಡಿದ್ದಾರೆ. ನಿಮ್ಮ ಮಕ್ಕಳಿಗೂ ಹೀಗೆ ಊಟ ಕೊಡುತ್ತೀರಾ? ಮನೆಯಿಂದ ತಂದು ಹಾಕ್ತಿರಾ? ವಾರ್ಡನ್ ದೇವರಾಜ ಸಸ್ಪೆಂಡ್ ಮಾಡಿ ಅಂತ ಉಪಲೋಕಾಯುಕ್ತ ಸೂಚನೆ ನೀಡಿದರು. ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ಇದ್ದಂತಹ ಅವ್ಯವಸ್ಥೆ ನಾ ಎಂದು ವೀರಪ್ಪ ಕಿಡಿ ಕಾರಿದರು.