ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅಚ್ಚರಿ ಘಟನೆಯೊಂದು ನಡೆದಿದ್ದು, ನಮ್ಮ ಮೆಟ್ರೋದಲ್ಲಿ ಇದೇ ಮೊದಲ ಬಾರಿಗೆ ದಾನಿಯಯೊಬ್ಬರ ಯಕೃತ್ ಅಂಗಾಂಗವನ್ನು ಸಾಗಣೆ ಮಾಡಿ ಸೂಕ್ತ ಸಮಯದಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ವೈಟ್ ಫೀಲ್ಡ್ನಿಂದ ಯುವಕನೋರ್ವನ ಲಿವರ್ ಅನ್ನು “ಗ್ರೀನ್ ಕಾರಿಡಾರ್” ಯೋಜನೆಯಡಿ ತ್ವರಿತವಾಗಿ ಮೆಟ್ರೋದಲ್ಲಿ ರಾಜರಾಜೇಶ್ವರಿ ನಗರದ ಸ್ಪರ್ಶ ಆಸ್ಪತ್ರೆ ಸಾಗಿಸಿ ಸಕಾಲದಲ್ಲಿ ಅಂಗಾಂಗ ಕಸಿ ನಡೆಸಿ ಯುವಕನೋರ್ವನಿಗೆ ಜೀವದಾನ ನೀಡಲಾಗಿದೆ.
ಬೆಂಗಳೂರು ಮಹಾ ನಗರದ ಸಂಚಾರ ದಟ್ಟಣೆ ನಡುವೆ ತ್ವರಿತವಾಗಿ ಅಂಗಾಂಗ ಸಾಗಾಟ ಮಾಡುವುದು ಸವಾಲಿನ ಕೆಲಸವಾಗಿತ್ತು. ವೈಟ್ ಫೀಲ್ಡ್ನಿಂದ ರಾಜರಾಜೇಶ್ವರಿ ನಗರಕ್ಕೆ ವಾಹನದಲ್ಲಿ ಅಂಗಾಂಗ ಸಾಗಾಟ ಮಾಡಲು 3 – 4 ತಾಸುಗಳ ಸಮಯ ಹಿಡಿಯುತ್ತಿತ್ತು. ಅಂಗಾಂಗ ಸಾಗಣೆಗೆ ನಮ್ಮ ಮೆಟ್ರೋ ಕೈ ಜೋಡಿಸಿದ್ದರಿಂದ ತ್ವರಿತವಾಗಿ ಸಾಗಿಸಲು ಸಹಾಯವಾಯಿತು.