ಮೈಸೂರು : ಇತ್ತೀಚಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳು ಡ್ರಗ್ಸ್ ಸಿಗರೇಟ್ ಮಧ್ಯದ ನಶೆಯಲ್ಲಿ ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಭಾರಿ ವೈರಲ್ ಆಗಿತ್ತು. ಅದಾದ ಬಳಿಕ ಇದೀಗ ಮೈಸೂರಿನಲ್ಲಿ ಕೈದಿಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳಿಂದಲೇ ಸಪ್ಲೈ ಆಗುತ್ತಿರುವುದು ಬೆಳಕಿಗೆ ಬಂದಿದೆ.
ಹೌದು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಗಾಂಜಾ ಘಾಟು ಜೋರಾಗಿದ್ದು, ಕೈದಿಗಳಿಗೆ ಪೇಸ್ಟ್ ರೂಪದಲ್ಲಿ ಗಾಂಜಾ ಸಪ್ಲೈ ಮಾಡಲಾಗುತ್ತಿದೆ. ಆಕಾಶ್ ಎಂಬ ಕೈದಿಗೆ ಪೇಸ್ಟ್ ನಲ್ಲಿ ಗಾಂಜಾ ಸಪ್ಲೈ ಆಗಿದೆ. KSISF ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಗಾಂಜಾ ಪೂರೈಕೆ ಆಗಿರುವ ಆರೋಪ ಕೇಳಿ ಬಂದಿದೆ. ಸಿಬ್ಬಂದಿಗಳನ್ನು ತಪಾಸಣೆ ಮಾಡುವಾಗ ಈ ಒಂದು ಘಟನೆ ಬೆಳಕಿಗೆ ಬಂದಿದೆ ರೂಪ ಎನ್ನುವ ಸಿಬ್ಬಂದಿ ಪ್ಯಾಂಟ್ ಬೆಲ್ಟ್ ನಲ್ಲಿ ಗಾಂಜಾ ಅಡಗಿಸಿಕೊಂಡು ಬಂದಿದ್ದಾರೆ ಬೆಲ್ಟ್ ಪರಿಶೀಲನೆ ಮಾಡಿದಾಗ ಗಾಂಜಾ 6 ಪ್ಯಾಕೆಟ್ ನಲ್ಲಿ ಪತ್ತೆಯಾಗಿದೆ.








