ಕಲಬುರ್ಗಿ : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನನ್ನು ಇದೀಗ ಬಂಧಿಸಲಾಗಿದೆ. ಉಪನ್ಯಾಸಕ ರಾಜಕುಮಾರ್ ನನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ರಾಜಕುಮಾರ ಕಲಬುರ್ಗಿ ಜಿಲ್ಲೆಯ ಅಫ್ಜಲಪುರ ಪಟ್ಟಣದ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ಉಪನ್ಯಾಸಕ ರಾಜಕುಮಾರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಹೊಸ ವರ್ಷಕ್ಕೆ ವಿದ್ಯಾರ್ಥಿನಿಗೆ ಗಿಫ್ಟ್ ಕೊಡುವ ನೆನಪದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಹೊಸ ವರ್ಷದ ದಿನದಂದು ಕಾಲೇಜಿಗೆ ಬೇಗ ಬರುವಂತೆ ಹೇಳಿ ಕರೆಸಿಕೊಂಡು ರಾಜಕುಮಾರ ವಿದ್ಯಾರ್ಥಿನಿಗೆ ಲೈಂಗಿಕ ಕಿರಿಕುಳ ನೀಡಿದ್ದಾನೆ. ಅರ್ಥಶಾಸ್ತ್ರ ಬೋಧನೆ ಮಾಡುತ್ತಿದ್ದ ಉಪನ್ಯಾಸಕ ರಾಜಕುಮಾರ ಕುಂಬಾರ್ ನ ವಿರುದ್ಧ ಅಫಜಲ್ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








