ಹೈದ್ರಾಬಾದ್ : ಇತ್ತೀಚಿಗೆ ಕಲ್ಬುರ್ಗಿಯಲ್ಲಿ ಹಾಡ ಹಗಲೇ ಜುವೆಲ್ಲರ್ ಮಾಲೀಕನಿಗೆ ಗನ್ ತೋರಿಸಿ 80 ಲಕ್ಷಕ್ಕೂ ಹೆಚ್ಚು ಚಿನ್ನಾಭರಣ ದೋಚಿದ ಪ್ರಕರಣ ನಡೆದಿತ್ತು. ಇದೀಗ ಹೈದರಾಬಾದ್ ನಲ್ಲಿ ಹಾಡ ಹಗಲೇ ಗುಂಡಿನ ದಾಳಿ ನಡೆಸಿ ಚಿನ್ನಾಭರಣ ದರೋಡೆ ನಡೆಸಿದ್ದಾರೆ.
ಹೌದು ಅಂಗಡಿ ತೆರೆದ ಕೆಲವೇ ನಿಮಿಷಗಳಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ಗುಂಡು ಹಾರಿಸಿ ದುಷ್ಕರ್ಮಿಗಳು ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಹೈದರಾಬಾದ್ನ ಚಂದಾನಗರದ ಖಜಾನಾ ಜುವೆಲರ್ಸ್ ನಲ್ಲಿ ಈ ಒಂದು ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಖಜಾನ ಜುವೆಲರ್ಸ್ ವ್ಯವಸ್ಥಾಪಕನಿಗೆ ಗಂಭೀರವಾದ ಗಾಯಗಳಾಗಿದ್ದು ಅಂಗಡಿ ಸಿಬ್ಬಂದಿ ಮತ್ತು ಗ್ರಾಹಕರಿಗೆ ಬೆದರಿಸಿ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರೀಯಾಗಿದ್ದಾರೆ ಮ್ಯಾನೇಜರ್ ಕಾಲಿಗೆ ಗುಂಡು ಹಾರಿಸಿರುವ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಎಂದು ತಿಳಿದುಬಂದಿದೆ.