ಹಾಸನ : ತನ್ನನ್ನು ಮದುವೆಯಾಗುವಂತೆ ಯುವಕನೊಬ್ಬ ಯುವತಿಗೆ ಪೀಡಿಸುತ್ತಿದ್ದ. ಈ ವೇಳೆ ಮದುವೆಗೆ ಒಪ್ಪದ ಯುವತಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾರಗೋಡು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಮದುವೆಗೆ ಒಪ್ಪದ ಯುವತಿಯ ಕೊಲೆಗೆ ಯತ್ನ ನಡೆದಿರುವ ಘಟನೆ ನಡೆದಿದೆ. ಮದುವೆಗೆ ನಿರಾಕರಿಸಿದ ಗಾನವಿ ಎನ್ನುವ ಯುವತಿಗೆ ಮೋಹಿತ್ ಎನ್ನುವ ಯುವಕ ಕೊಲೆಗೆ ಯತ್ನಿಸಿದ್ದಾನೆ. ಆಲೂರು ತಾಲೂಕಿನ ಕಾರುಗೋಡು ಗ್ರಾಮದ ಮೋಹಿತ್ ಮತ್ತು ಗಾನವಿ ಎರಡು ವರ್ಷದಿಂದ ಸ್ನೇಹಿತರಾಗಿದ್ದರು. ಮೋಹಿತ್ ನಿಂದ ಕೆಲ ದಿನಗಳಿಂದ ಗಾನವಿ ಅಂತರವನ್ನು ಕಾಯ್ದುಕೊಂಡಿದ್ದಳು.
ಆದರೂ ಮದುವೆ ಆಗುವಂತೆ ಮೋಹಿತ್ ಒತ್ತಾಯ ಮಾಡುತ್ತಿದ್ದ. ಮೋಹಿತ್ ಕಾಟದ ಬಗ್ಗೆ ಗಾನವಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು. ಯಾರ ತಂಟೆಗೂ ಯಾರು ಬರದಂತೆ ಎರಡು ಕುಟುಂಬಗಳು ಮಾತುಕತೆ ನಟಿಸಿದ್ದವು. ಗ್ರಾಮಸ್ಥರ ಜೊತೆಗೆ ಮುಚ್ಚಳಿಕೆ ಬರಿಸುವ ತಯಾರಿಯಲ್ಲಿ ಕುಟುಂಬಗಳು ಇದ್ದವು. ಈ ವೇಳೆ ಪಟ್ಟಣ ಪಂಚಾಯಿತಿ ಮುಂಭಾಗ ನಿಂತಿದ್ದ ಗಾನವಿ ಕೊಲೆಗೆ ಮೋಹಿತ್ ಯತ್ನಿಸಿದ್ದಾನೆ.
ಮಾರಕಾಸ್ತ್ರದಿಂದ ಗಾನವಿಯ ಮೇಲೆ ಮೋಹಿತ್ ಅಟ್ಯಾಕ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ಗಾನವಿಯ ತಲೆ, ಕೈಗಳಿಗೆ ತೀವ್ರವಾಗಿ ಗಾಯವಾಗಿದ್ದು, ಕೂಡಲೇ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.