ಹಾಸನ : ಹಾಸನದಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು, ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಯೊಬ್ಬ ಕುಡಿದು ಬಂದು ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿ ನಡೆದಿದೆ.
ಪತಿ ಶ್ರೀಮಂತ ಕುಡಿತದ ಚಟಕ್ಕೆ ದಾಸನಾಗಿದ್ದ ಪತ್ನಿ ಸುಶ್ಮಿತಾಗೆ ನಿತ್ಯ ಕಿರುಕುಳ ನೀಡುತ್ತಿದ್ದ ಮದ್ಯ ಸೇವನೆ ಜೊತೆಗೆ ಶ್ರೀಮಂತ ಅಕ್ರಮ ಸಂಬಂಧ ಕೂಡ ಹೊಂದಿದ್ದ ಎಂದು ಆರೋಪ ಕೇಳಿ ಬಂದಿದೆ. ಜುಲೈ 30ರ ರಾತ್ರಿ ಕುಡಿದು ಬಂದು ಸುಶ್ಮಿತಾಳ ಕೊಲೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡಿದ್ದ ನವವಿವಾಹಿತೆಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯ ವಿರುದ್ಧ ಸದ್ಯ ಯಸಳೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮದುವೆಯಾಗಿ 7 ತಿಂಗಳಲ್ಲಿ ಪಾಪಿಪತಿ ಕೊಲೆಗೆ ಯತ್ನಿಸಿದ್ದಾನೆ. 2024 ಡಿಸೆಂಬರ್ ಮತ್ತು ಸುಶ್ಮಿತಾ ಮದುವೆಯಾಗಿತ್ತು . ಮದುವೆ ಆದ ಒಂದು ತಿಂಗಳ ಬಳಿಕ ಶ್ರೀಮಂತ್ ಸುಶ್ಮಿತಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಮದುವೆಯಾದ ಏಳು ತಿಂಗಳಲ್ಲಿಯೇ ಪತ್ನಿಗೆ ಕಿರುಕುಳ ನೀಡಿ ಪತಿಯೇ ಕೊಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಪತ್ನಿ ಸುಶ್ಮಿತಾಗಿ ಬಲ್ಲಂತವಾಗಿ ಮಾತ್ರೆ ತಿನ್ನಿಸಿ ಸೀಮೆಎಣ್ಣೆ ಸುರಿದು ಪತಿ ಶ್ರೀಮಂತ ಬೆಂಕಿ ಹಚ್ಚಲು ಯತ್ನಿಸಿರುವ ಆರೋಪ ಕೇಳಿ ಬಂದಿದ್ದು, ಪತಿ ಶ್ರೀಮಂತ ಪರಾರಿಯಾಗಿದ್ದು ಪೊಲೀಸರು ಆತನ ಬಂಧನಕ್ಕೆ ಬಲೇ ಬೀಸಿದ್ದಾರೆ.