ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶಿವಗಳನ್ನು ಕೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ಹೇಳಿಕೆ ನೀಡಿದ ಬಳಿಕ ರಾಜ್ಯ ಸರ್ಕಾರ ಈ ಒಂದು ಪ್ರಕರಣದ ತನಿಖೆಯನ್ನ ಎಸ್ಐಟಿಗೆ ವಹಿಸಿತ್ತು. ಇದೀಗ ಧರ್ಮಸ್ಥಳದಲ್ಲಿ ಎಸ್ಐಟಿ ಅಧಿಕಾರಿಗಳು ಅಸ್ತಿಪಂಜರ ಶೋಧಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಕಳೆದ ಹಲವು ದಿನಗಳಿಂದ ಧರ್ಮಸ್ಥಳದಲ್ಲಿ ಮಾಸ್ಕ್ ಮ್ಯಾನ್ ತೋರಿಸಿದ ಹಲವಾರು ಸ್ಥಳಗಳಲ್ಲಿ ನೆಲ ಅಗೆದು ಎಸ್ಐಟಿ ಅಧಿಕಾರಿಗಳು ಅಸ್ತಿಪಂಜರಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಕೆಲವು ಮೂಳೆಗಳು ಸಿಕ್ಕಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಆ ಒಂದು ಮೂಳೆಗಳಲ್ಲಿನ ಡಿಎನ್ಎ ಸಂಪೂರ್ಣವಾಗಿ ನಾಶವಾಗಿದೆ.
ಮುಸುಕುಧಾರಿ ವ್ಯಕ್ತಿ ತೋರಿಸಿದ ಎಲ್ಲಾ ಕಡೆಗಳಲ್ಲೂ ಎಸ್ಐಟಿ ಅಧಿಕಾರಿಗಳು ನೆಲ ಅಗೆದಿದ್ದಾರೆ. ಆದರೆ ಇದುವರೆಗೂ ಆತ ಹೇಳಿಕೆ ನೀಡಿರುವುದಕ್ಕೂ ಯಾವುದೇ ಅಸ್ತಿಪಂಜರಗಳು ಅಲ್ಲಿ ದೊರೆತಿಲ್ಲ. ಇದೀಗ ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳದಲ್ಲಿ ಇಂದು ಅಸ್ತಿಪಂಜರ ಶೋಧಕ್ಕೆ ಬ್ರೇಕ್ ಹಾಕಿದ್ದು ಎಸ್ಐಟಿ ಕಚೇರಿಯಿಂದಲೂ ಕೆಲವು ಅಧಿಕಾರಿಗಳು ಶಿವಾನಂದಳ ಸೇರಿದಂತೆ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.