ಚಿಕ್ಕಮಗಳೂರು : ಲಕ್ಕವಳ್ಳಿ ಬಳಿ ಭದ್ರಾ ನಾಲೆಗೆ ಹಾರಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ವಿಠ್ಠಲ್ (48) ಹಾಗೂ ಗಂಗಮ್ಮ (40) ಆತ್ಮಹತ್ಯೆಗೆ ಶರಣಾದ ದಂಪತಿಗಳು ಎಂದು ತಿಳಿದುಬಂದಿದೆ.
ಮೃತ ದಂಪತಿಗಳು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗೌಳಿಗಾರ ಕ್ಯಾಂಪ್ ನಿವಾಸಿಗಳೆಂದು ತಿಳಿದುಬಂದಿದೆ. ಜಗದಾಂಬೆ ದೇವಸ್ಥಾನಕ್ಕೆ ವಿಠ್ಠಲ್ ಮತ್ತು ಗಂಗಮ್ಮ ಪೂಜೆಗೆ ಬಂದಿದ್ದರು. ಈ ವೇಳೆ ಭದ್ರಾ ನಾಲೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಘಟನೆ ಕುರಿತಂತೆ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.