ಚಾಮರಾಜನಗರ : ಕಾಡಾನೆ ದಾಳಿಗೆ ಓರ್ವ ಬಲಿ ಮತ್ತೊರ್ವ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಲ್ಲಿಕತ್ರಿ ಬಳಿ ಈ ಒಂದು ಘಟನೆ ಸಂಭವಿಸಿದೆ. ಸೋಲಿಗ ಕೆತೇಗೌಡ ಮೃತಪಟ್ಟ ದುರ್ದೇವಿ ಎಂದು ತಿಳಿದುಬಂದಿದೆ.
ಇನ್ನು ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಕೊಲ್ಲ ಎನ್ನುವ ವ್ಯಕ್ತಿ ಪಾರು ಆಗಿದ್ದಾರೆ. ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಒಂದು ಘಟನೆ ನಡೆದಿದೆ.ಬೈಲೂರು ವಲಯ ಅರಣ್ಯದ ನಲ್ಲಿ ಕತ್ರಿ ಬಳಿ ಕಾಡಾನೆ ದಾಳಿ ನಡೆಸಿತ್ತು. ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿದ್ದು ಬಿಆರ್ ಟಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








