ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಪಟಾಕಿ ವಿತರಿಸದಂತೆ ಶಾಸಕರ ಕಚೇರಿಗೆ ಬೀಗ ಹಾಕಲಾಗಿದೆ. ಆರ್ ಆರ್ ನಗರ ಶಾಸಕ ಮುನಿರತ್ನ ಕಚೇರಿಗೆ ಪೊಲೀಸರು ಬೀಗ ಹಾಕಿದ್ದಾರೆ. ಬೆಂಗಳೂರಿನ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಕಚೇರಿಗೆ ಬೀಗ ಹಾಕಲಾಗಿದೆ.
ಆರ್ ಆರ್ ನಗರ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿದೇವಿ ನಗರದಲ್ಲಿ ಶಾಸಕರ ಕಚೇರಿ ಇದ್ದು ಕಚೇರಿಯ ಮುಂದೆ ವೇದಿಕೆ ನಿರ್ಮಿಸಿ ಪಟಾಕಿ ವಿತರಣೆಗೆ ಸಿದ್ಧತೆ ನಡೆದಿದೆ ಸ್ಥಳಕ್ಕೆ ಶಾಸಕ ಮುನಿರತ ಆಗಮಿಸುವ ಮುನ್ನವೇ ಪೊಲೀಸ್ರು ಕಚೇರಿಗೆ ಬೀಗ ಹಾಕಿದ್ದಾರೆ ಪ್ರತಿವರ್ಷ ಶಾಸಕರು ಇದೇ ಸ್ಥಳದಲ್ಲಿ ಪಟಾಕಿ ವಿತರಿಸುತ್ತಿದ್ದರು.








