ಬೆಂಗಳೂರು : ಪ್ರಿಯತಮೆ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಬ್ರೇಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ಇಂದು ನಡೆದಿದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಕಿರಣ್ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಾನು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಅಲ್ಲದೆ ಈ ವೇಳೆ ಪ್ರೇಯಸಿಗೂ ಬೆಂಕಿ ಹಚ್ಚಲು ಪ್ರಿಯಕರ ಕಿರಣ್ ಯತ್ನಿಸಿದ್ದಾನೆ. ಕಾಲಿಗೆ ಕಂಪನಿಯಲ್ಲಿ ಕಿರಣ್ ಹಾಗೂ ಯುವತಿ ಇಬ್ಬರೂ ಕೆಲಸ ಮಾಡುತ್ತಿದ್ದರು ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ಬಳಿಕ ಪ್ರೀತಿಗೆ ತಿರುಗಿತ್ತು. ತಾಯಿ ಮತ್ತು ಅಣ್ಣನ ಜೊತೆಗೆ ಯುವತಿ ವಾಸವಿದ್ದಳು. ಇಂದು ಯುವತಿ ಮನೆಗೆ ಆಗಮಿಸಿದ ಪ್ರಿಯಕರ ಕಿರಣ್ ಯಾರು ಇಲ್ಲದನ್ನು ನೋಡಿಕೊಂಡು ಮಾತನಾಡಲು ಬಂದಿದ್ದ.
ಇಬ್ಬರು ಪರಸ್ಪರ ಮಾತನಾಡುವಾಗ ಯಾವುದೋ ವಿಚಾರವಾಗಿ ಗಲಾಟೆ ಆಗಿದೆ. ಗಲಾಟೆ, ವಿಕೋಪಕ್ಕೆ ತಿರುಗಿ, ಈ ವೇಳೆ ಮಾಡಿಕೊಂಡು ಪ್ರಿಯಕರ ಬೆಂಕಿ ಹಚ್ಚಿಕೊಂಡು, ಆತನ ಪ್ರೇಯಸಿಗೂ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ವೇಳೆ ಸಣ್ಣ ಪುಟ್ಟ ಗಾಯಗಳಿಂದ ಯುವತಿ ಪಾರಾಗಿದ್ದಾಳೆ. ಸದ್ಯ ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








