ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೊಂದಿಗೆ ಮಹಿಳೆ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಪೊಲೀಸ್ ಕಾನ್ಸ್ಟೇಬಲ್ ರಾಘವೇಂದ್ರನ ಜೊತೆಗೆ ಮೋನಿಕಾ ಇದೀಗ ಪರಾರಿಯಾಗಿದ್ದಾಳೆ. ಎಚ್ಎಸ್ಆರ್ ಪೊಲೀಸ್ ಠಾಣೆಯ ಹೊಯ್ಸಳ ವಾಹನ ಓಡಿಸುತ್ತಿದ್ದ ರಾಘವೇಂದ್ರ ಹಾಗೂ ಮೊದಲ ಗಂಡನನ್ನು ಬಿಟ್ಟು ಮೋನಿಕಾ ಎರಡನೇ ಮದುವೆಯಾಗಿದ್ದಳು. ಇದೀಗ ಎರಡನೇ ಗಂಡನಿಗೂ ಕೈಕೊಟ್ಟು ಪ್ರಿಯಕರ ಕಾನ್ಸ್ಟೇಬಲ್ ಜೊತೆಗೆ ಮೋನಿಕ ಪರಾರಿಯಾಗಿದ್ದಾಳೆ.
ಕಾನ್ಸ್ಟೇಬಲ್ ರಾಘವೇಂದ್ರ ನಿಗೂ ಕೂಡ ಮದುವೆಯಾಗಿ ಒಂದು ಮಗುವಿದೆ ಉತ್ತರ ಕರ್ನಾಟಕ ಮೂಲದ ರಾಘವೇಂದ್ರ ಹಾಗೂ ಮೈಸೂರು ಮೂಲದ ಮೋನಿಕಾ ಎಂದು ತಿಳಿದುಬಂದಿದ್ದು, 12 ವರ್ಷದ ಮಗನಿದ್ದರೂ ಕೂಡ ಪ್ರಿಯಕರನ ಜೊತೆಗೆ ಮೋನಿಕ ಪರಾರಿಯಾಗಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಮೋನಿಕಾಗೆ ಪೊಲೀಸ್ ಕಾನ್ಸ್ಟೇಬಲ್ ರಾಘವೇಂದ್ರನ ಪರಿಚಯ ಆಗಿತ್ತು. ನಂತರ ಪ್ರತಿದಿನ ಕರೆ ಮಾಡಿ ರಾಘವೇಂದ್ರ ಮತ್ತು ಮೋನಿಕಾ ಮಾತನಾಡುತ್ತಿದ್ದರು.
ಕಳೆದ ಮೂರು ತಿಂಗಳ ಹಿಂದೆ ಮೋನಿಕಾ ಠಾಣೆಗೆ ದೂರು ನೀಡಿರುತ್ತಾಳೆ. ಗಡನೆಗೆ ಕರೆಸಿ, ಬುದ್ಧಿ ಹೇಳಿ ಅಂತ ಮೋನಿಕ ದೂರು ನೀಡಿರುತ್ತಾಳೆ. ಪತಿ ವಿರುದ್ಧವಾಗಿ ಚಂದ್ರಾ ಲೇಔಟ್ ಠಾಣೆಗೆ ಮೋನಿಕ ದೂರು ನೀಡಿರುತ್ತಾಳೆ. ಗಂಡ ಠಾಣೆ ಹೋಗಿದ್ದಾಗ ಮನೆಯಲ್ಲಿ ಇದ್ದಂತಹ 160 ಗ್ರಾಂ ಚಿನ್ನ ಹಾಗೂ ಸುಮಾರು 2 ಲಕ್ಷ ರೂಪಾಯಿ ಹಣದೊಂದಿಗೆ ಮೋನಿಕಾರಿಯಾಗಿದ್ದಾಳೆ. ಇದೀಗ ರಾಘವೇಂದ್ರನನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ.








