ಬೆಂಗಳೂರು : ಬೆಂಗಳೂರಲ್ಲಿ ಬಿಎಂಟಿಸಿ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಮತ್ತೊಂದು ಹಲ್ಲೆ ಪ್ರಕರ ಣ ನಡೆದಿದ್ದು, ಬಿಎಂಟಿಸಿ ಸಿಬ್ಬಂದಿ ಮೇಲೆ ಬೈಕ್ ಸವಾರರಿಂದ ಹಲ್ಲೆ ನಡೆದಿರುವ ಘಟನೆ ಬನಶಂಕರಿಯ ಕದಿರಿನ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ
ಬಸ್ ಚಾಲಕ ಉಚಿರಪ್ಪ ಹಾಗೂ ಕಂಡಕ್ಟರ್ ಪ್ರಕಾಶ್ ಮೇಲೆ ಬೈಕ್ ಸವಾರ ಹಲ್ಲೆ ನಡೆಸಿದ್ದಾರೆ. ರಾಂಗ್ ಸೈಡ್ ನಲ್ಲಿ ಬಂದಿದ್ದನ್ನು ಪ್ರವೇಶಿಸಿದ್ದಕ್ಕೆ, ಎರಡು ಬೈಕ್ಗಳಲ್ಲಿ ಬಂದು ನಾಲ್ವರು ಬಿಎಂಟಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್ ಮೇಲೆ ಬೈಕ್ ಸವಾರರು ಹಲ್ಲೆ ನಡೆಸಿದ್ದಾರೆ. ತಕ್ಷಣ ಚಾಲಕ 112 ಗೆ ಕರೆ ಮಾಡಲಾಗಿದ್ದು, ಬನಶಂಕರಿ ಪೊಲೀಸರು ಒಬ್ಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.