ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಅಂತೂ ಪುಂಡರಿಗೆ ಗಿಡಿ ಗಿಡಿಗಳಿಗೆ ಹಾಗೂ ಅರುಡಿಶೀಟರ್ ಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಆದರೆ ಬೆಂಗಳೂರಿನಲ್ಲಿ ಅಚ್ಚರಿಗೊಳಿಸುವ ಒಂದು ಘಟನೆ ನಡೆದಿದ್ದು ಪತ್ನಿಗೆ ಹೆದರಿದ ರೌಡಿಶೀಟರ್ ಒಬ್ಬ ಠಾಣೆಯ ಮೆಟ್ಟಿಲೇರಿ ಪೊಲೀಸರ ಸಹಾಯ ಕೋರಿರುವ ಘಟನೆ ಇದೀಗ ವರದಿಯಾಗಿದೆ.
ಹೌದು ಅಚ್ಚರಿ ಅನಿಸಿದರು ಇದು ಸತ್ಯ. ರೌಡಿಶೀಟರ್ ಸೈಯದ್ ಅಸ್ಗರ್ ಹೆಂಡತಿ ಅಂದ್ರೆ ಬೆಚ್ಚಿ ಬೀಳ್ತಾನೆ. ಗಾಂಜಾ ಪೆಡ್ಲಿಂಗ್, ಕಳ್ಳತನ, ಕೊಲೆ ಯತ್ನದಂತಹ ಗಂಭೀರ ಆರೋಪ ಹೊಂದಿರೋ ಈತ ಕೇಸ್ಗಳಾದ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗ್ತಿದ್ದ. ಹೀಗಿರುವಾಗ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರೋ ಈತ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ. ವಿಶೇಷ ಅಂದ್ರೆ ಪ್ರತಿಬಾರಿ ಆರೋಪಿಯಾಗಿ ಬರ್ತಿದ್ದ ಈತ ಈ ಬಾರಿ ಸಂತ್ರಸ್ತನಾಗಿ ಬಂದಿದ್ದಾನೆ.
ಇದಕ್ಕೆ ಕಾರಣ ಕೇಳಿದ್ರೆ ಒಂದು ಕಡೆ ನಗು ಬರೋದು ಸಹಜ ಏಕೆಂದರೆ 2ನೇ ಪತ್ನಿಯನ್ನ ಬಿಡು ಎಂದು ಮೊದಲ ಹೆಂಡತಿ ರೌಡಿಶೀಟರ್ ಶೀಟರ್ ಕೈ ಮುರಿದಿದ್ದಲ್ಲದೆ, ಕಣ್ಣಿಗೆ ಚಾಕು ಕೂಡ ಇರಿದಿದ್ದಾಳೆ. ಹೀಗಾಗಿ ಪತ್ನಿ ವಿರುದ್ಧ ಜೆಜೆ ನಗರ ಠಾಣೆಗೆ ಸೈಯದ್ ಅಸ್ಗರ್ ದೂರು ನೀಡಿದ್ದಾರೆ. ಆತನಿಗೆ ಎರಡನೇ ಪತ್ನಿ ಸಾಥ್ ಕೊಟ್ಟಿದ್ದಾಳೆ. ರೌಡಿಶೀಟರ್ ಸೈಯದ್ ಅಸ್ಗರ್ ಮೊದಲ ಪತ್ನಿ ಈ ಮೊದಲು ಕೂಡ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಳು. ನಿನ್ನ ತಲೆ ಕಡಿಯುತ್ತೇನೆ, ಎರಡು ದಿನ ಕಾಯ್ತಿರು ಎಂದು ವಾರ್ನಿಂಗ್ ಮಾಡಿದ್ದಳು. ಮಚ್ಚು ಮತ್ತು ಬಾಕು ಹಿಡಿದು ವಿಡಿಯೋ ಮಾಡಿದ್ದ ಬೆನ್ನಲ್ಲೇ ಪತಿಯ ಮೇಲೆ ಆಕೆ ಅಟ್ಯಾಕ್ ಮಾಡಿದ್ದಾಳೆ.








